-->

 ಉಜಿರೆ 8 ರ ಬಾಲಕನ ಅಪಹರಣ ಪ್ರಕರಣದ ಹಿಂದೆ ಇದ್ದಾನೆ ಡಾನ್: ಸುಫಾರಿ ನೀಡಿದ ಖದೀಮ ಕಿಡ್ನ್ಯಾಪ್ ಗೆ ಜಾಲ ಹೆಣೆದದ್ದು ಹೀಗೆ...

ಉಜಿರೆ 8 ರ ಬಾಲಕನ ಅಪಹರಣ ಪ್ರಕರಣದ ಹಿಂದೆ ಇದ್ದಾನೆ ಡಾನ್: ಸುಫಾರಿ ನೀಡಿದ ಖದೀಮ ಕಿಡ್ನ್ಯಾಪ್ ಗೆ ಜಾಲ ಹೆಣೆದದ್ದು ಹೀಗೆ...





ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಎಂಟು ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿರುವಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವವರ ಪೊಲೀಸರ ಬಲೆಗೆ ಬೀಳುತ್ತಿದ್ದಾರೆ. ಬಾಲಕ ಮತ್ತೆ ಹೆತ್ತವರ ಮಡಿಲು ಸೇರಿದರೆ ಮತ್ತೊಂದೆಡೆ ಖದೀಮರು ಸೆರೆಮನೆ ಸೇರುತ್ತಿದ್ದಾರೆ. 

 


 

ಎಂಟರ ಹರೆಯದ ಬಾಲಕ ಅನುಭವ್ ನನ್ನು ಕಿಡ್ನ್ಯಾಪ್ ಮಾಡಿದ ಮಂಡ್ಯ ಜಿಲ್ಲೆಯ ರಂಜಿತ್(22), ಹನುಮಂತು(21), ಮೈಸೂರಿನ ಗಂಗಾಧರ(25), ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಕಮಲ್(22) ಕೋಲಾರ ಜಿಲ್ಲೆಯ ಮಂಜುನಾಥ್(24) ಮತ್ತು ಮಹೇಶ್ (26) ಬಂಧಿತರು. ಇದರಲ್ಲಿ ರಂಜಿತ್, ಹನುಮಂತು, ಗಂಗಾಧರ, ಕಮಲ್ ಉಜಿರೆಗೆ ಬಂದು ಕಿಡ್ನ್ಯಾಪ್ ಮಾಡಿದವರಾದರೆ ಮಂಜುನಾಥ್ ಮತ್ತು ಮಹೇಶ್ ಅಪಹರಣಕಾರರಿಗೆ ಆಶ್ರಯ ನೀಡಿದವರಾಗಿದ್ದಾರೆ.


ಅಪಹರಣಕಾರರ ಹಿಂದೆ ಇದ್ದಾನೆ ಡಾನ್- ಪೋನ್ ನಲ್ಲಿ ಈತನ ವ್ಯವಹಾರ


ಬಾಲಕ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ವ್ಯಕ್ತಿ ಈ ಪ್ಲ್ಯಾನ್ ಮಾಡಿದ್ದಾನೆ. ಈತ ಮಧ್ಯಪ್ರದೇಶದಲ್ಲಿ ಕೂತು ಕಿಡ್ನ್ಯಾಪ್ ಪ್ಲ್ಯಾನ್ ಮಾಡಿದ್ದಾನೆ. ಬಾಲಕನ ತಂದೆಯೊಂದಿಗೆ ಹಿಂದೆ ಮಾರ್ಕೆಟಿಂಗ್ ಬ್ಯುಸಿನೆಸ್ ನಲ್ಲಿ ಪರಿಚಯವಾಗಿದ್ದ ವ್ಯಕ್ತಿ ಈತ. ಆ ಸಂದರ್ಭದಲ್ಲಿ ಬಾಲಕನ ತಂದೆ ಬಿಟ್ ಕಾಯಿನ್ ವ್ಯವಹಾರ ನಡೆಸುತ್ತಿದ್ದರು. ಇದರ ಮಾಹಿತಿ ಇದ್ದ ಈ ವ್ಯಕ್ತಿ ಬಾಲಕನನ್ನು ಅಪಹರಿಸಿ ಬಿಟ್ ಕಾಯಿನ್ ಮೂಲಕ ಹಣ ಗಳಿಸುವ ತಂತ್ರ ಮಾಡಿದ್ದಾನೆ. ಅದಕ್ಕಾಗಿ ರಂಜಿತ್, ಹನುಮಂತು, ಗಂಗಾಧರ, ಕಮಲ್ ರನ್ನು ಬಾಡಿಗೆ ಪಡೆದು ಕಿಡ್ನ್ಯಾಪ್ ಮಾಡಿಸಿದ್ದಾನೆ. ಇವರಿಗೆ ಕಿಡ್ನ್ಯಾಪ್ ಮಾಡಿದ ಒಂದು ದಿನದಲ್ಲಿ ಹಣ ಸಿಗುತ್ತದೆ. ನಿಮಗೆ ಏಳು ಲಕ್ಷ ಕೊಡುವೆ ಎಂದು ಹೇಳಿದ್ದಾನೆ.


ಡಿಸೆಂಬರ್ 17 ರಂದು ಸಂಜೆ ಅಪಹರಣ ಮಾಡುವ ಮುಂಚೆ ಅಪಹರಣಕಾರರು ಕೆಲವು ದಿನಗಳ ಕಾಲ ಉಜಿರೆಯಲ್ಲಿ ಯೋಜನೆಯನ್ನು ರೂಪಿಸಿದ್ದಾರೆ. ಡಿಸೆಂಬರ್ 17 ರಂದು ಸಂಜೆ ಅಪಹರಣ ಮಾಡಿದ ಅಪಹರಣಕಾರರು ವಿವಿಧೆಡೆ ಮಗುವನ್ನು ಕಾರಿನಲ್ಲಿ ಕೊಂಡು ಹೋಗಿದ್ದಾರೆ. ಬೆಂಗಳೂರಿನಲ್ಲಿರುವ ಒಂದು ಮನೆಯಲ್ಲಿ ಹದಿನೈದು ನಿಮಿಷಗಳ ಕಾಲ ವಿಶ್ರಾಂತಿಯನ್ನು ಪಡೆದಿದ್ದಾರೆ. ಸುಫಾರಿ ಕೊಟ್ಟ ವ್ಯಕ್ತಿ ಒಂದು ದಿನದಲ್ಲಿ ವ್ಯವಹಾರ ಮುಗಿಯುತ್ತದೆ ಎಂದು ತಿಳಿಸಿದ್ದ. ಆದರೆ ದಿನ ಕಳೆದರೂ ಕೊನೆ ಕಾಣದೆ ಇರುವುದರಿಂದ ಅಂತಿಮವಾಗಿ ಕೋಲಾರದಲ್ಲಿ ತಮ್ಮ ಪರಿಚಯದ ಮಂಜುನಾಥ್ ಎಂಬವನನ್ನು ಸಂಪರ್ಕಿಸಿ ಅವನ ಮೂಲಕ ಮಹೇಶ್ ಎಂಬವನ ಮನೆಯಲ್ಲಿ ತಂಗಿದ್ದಾರೆ.


ಆರೋಪಿಗಳನ್ನು ಮೊದಲೇ ಗ್ರಹಿಸಿಕೊಂಡಿದ್ದ ಪೊಲೀಸರು ಮಂಜುನಾಥ್ ಗೆ ಆರೋಪಿಗಳು ಮಾಡಿದ ಪೋನ್ ಕರೆಯಿಂದ ಆರೋಪಿಗಳ ನಿಖರ ಲೊಕೇಶನ್ ತಿಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಕೋಲಾರ ಎಸ್ ಪಿ ಯವರನ್ನು ಸಂಪರ್ಕಿಸಿದ ಪೊಲೀಸರು ಸ್ಥಳೀಯ ಪೊಲೀಸರ ಸಹಕಾರದಿಂದ ಇಂದು ಸೂರ್ಯ ಮೂಡುವ ಮುನ್ನ ಬಾಲಕನನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಇದರ ಸೂತ್ರಧಾರಿ ಡಾನ್ ಬಂಧನಕ್ಕೆ ಬಲೆ ಬೀಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99