ಮಂಗಳೂರಿನಲ್ಲಿ ಮತ್ತೆ ಪೊಲೀಸರ ಮೇಲೆ ದಾಳಿ- ಇಬ್ಬರು ಪೊಲೀಸರಿಗೆ ಗಾಯ, ಬಂದೂಕು ಡ್ಯಾಮೆಜ್!
ಮಂಗಳೂರು: ಮಂಗಳೂರಿನಲ್ಲಿ ವಾರದಲ್ಲಿ ಎರಡನೇ ಬಾರಿಗೆ ಪೊಲೀಸರ ಮೇಲೆ ದಾಳಿಯಾಗಿದೆ.
ಇತ್ತೀಚೆಗೆ ನ್ಯೂಚಿತ್ರ ಸಿನಿಮಾ ಟಾಕಿಸ್ ಬಳಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಮೇಲೆ ದಾಳಿ ನಡೆದ ಪ್ರಕರಣ ನಡೆದ ಕೆಲವೆ ದಿನಗಳಲ್ಲಿ ನಿನ್ನೆ ರಾತ್ರಿ ಕೂಳೂರಿನಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆದಿದೆ.
ಸುರತ್ಕಲ್ ಕಡೆಯಿಂದ ಪಾನಮತ್ತರಾಗಿ ಬಂದ ಇಬ್ಬರು ಕೂಳೂರು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರ ಕೈಯಲ್ಲಿದ್ದ ಬಂದೂಕನ್ನು ನೆಲಕ್ಕೆ ಹೊಡೆದು ಹಾನಿ ಮಾಡಿದ್ದಾರೆ. ಹಲ್ಲೆಯಿಂದ ಪೊಲೀಸರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಆರೋಪಿಗಳು ಪರಾರಿಯಾಗುವ ವೇಳೆ ಅವರ ವಾಹನ ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆದ ಕಾರಣ ಅವರು ಗಾಯಗೊಂಡಿದ್ದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದು ವಾರದಲ್ಲಿ ನಡೆದಿರುವ ಎರಡು ಪ್ರಕರಣ ನಗರದಲ್ಲಿ ಆತಂಕ ಸೃಷ್ಟಿಸಿದೆ