
INSTAGRAM ತಂದ ಕಂಟಕ: 13 ರ ಬಾಲಕಿಗೆ .... ಪೊಟೋ ಕಳುಹಿಸುವಂತೆ ಬ್ಲ್ಯಾಕ್ ಮೇಲ್
ಬೆಂಗಳೂರು: ಇನ್ಸ್ಟಾಗ್ರಾಂ ಖಾತೆಯನ್ನು ಆರಂಭಿಸಿದ 13 ವರ್ಷದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ ಅಪರಿಚಿತ ವ್ಯಕ್ತಿ ... ಪೊಟೋ ಕಳುಹಿಸುವಂತೆ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಈ ಬಾಲಕಿ ಜೊತೆಗೆ ಇನ್ಸ್ಟಾ ಗ್ರಾಂ ನಲ್ಲಿ ಸ್ನೇಹ ಬೆಳೆಸಿದ ಅಪರಿಚಿತ ವ್ಯಕ್ತಿ ಮೊದಲಿಗೆ ತನ್ನ ಖಾಸಗಿ ವಿಡಿಯೋ ಮತ್ತು ಪೊಟೋಗಳನ್ನು ಬಾಲಕಿಗೆ ಕಳುಹಿಸಿದ್ದ. ಅದಾದ ಬಳಿಕ ಬಾಲಕಿಯಲ್ಲಿ .... ಪೊಟೋ ಮತ್ತು ವಿಡಿಯೋ ಕಳುಹಿಸುವಂತೆ ಬ್ಲ್ಯಾಕ್ ಮೇಲ್ ಆರಂಭಿಸಿದ್ದಾನೆ
ಇದರಿಂದ ಗಾಬರಿಬಿದ್ದ ಬಾಲಕಿ ಆತ ಕಳುಹಿಸಿದ ಪೊಟೋ ವಿಡಿಯೋಗಳನ್ನು ಡಿಲಿಟ್ ಮಾಡಿದ್ದಳು. ಇದಾದ ಬಳಿಕವು ನಿರಂತರವಾಗಿ ಮೆಸೆಜ್ ಮಾಡಿದ ಪೋಟೋ ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಈ ವಿಚಾರ ಬಾಲಕಿಯ ಮನೆಯವರಿಗೆ ಗೊತ್ತಾಗಿ ಆತನ ಖಾತೆಗೆ ರಿಪೋರ್ಟ್ ಮಾಡಿ ಸುಮ್ಮನಿದ್ದರು.
ಆದರೆ ಆತ ಮತ್ತೊಂದು ನಕಲಿ ಖಾತೆಯನ್ನು ಸೃಷ್ಟಿಸಿ ಬಾಲಕಿಗೆ ... ಸಹಕರಿಸುವಂತೆ ಆಡಿಯೋ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ. ಇದೀಗ ಬಾಲಕಿಯ ಮನೆಯವರು ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ಇಮೇಲ್ ಮೂಲಕ ದೂರು ನೀಡಿದ್ದಾರೆ.