ಸೆಲೆಬ್ರಿಟಿಗಳ ಪೋಟೋ , ವಿಡಿಯೋ ಶೇರ್ ಮಾಡಿದ್ರೆ ದುಡ್ಡು ಬರುತ್ತಾ? - ಈ ಸ್ಟೋರಿ ನೋಡಿ
Sunday, December 20, 2020
(ಗಲ್ಫ್ ಕನ್ನಡಿಗ)ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿ ಗಳ ಪೋಟೋ ವಿಡಿಯೋ ಸಾಕಷ್ಟು ಸಂಖ್ಯೆಯಲ್ಲಿ ಶೇರ್ ಆಗುತ್ತಲೆ ಇರುತ್ತದೆ. ಅಭಿಮಾನಿಗಳು ಶೇರ್ ಮಾಡುವ ಪೋಟೋಗಳಿಂದ ಶೇರ್ ಮಾಡಿದವರಿಗೆ ದುಡ್ಡು ಸಿಗುತ್ತಾ? ದುಡ್ಡು ಸಿಗುತ್ತದೆ ಎಂದು ನಂಬಿ ಬೆಂಗಳೂರಿನ ಮಹಿಳೆ ಮೋಸ ಹೋಗಿದ್ದಾರೆ.
(ಗಲ್ಫ್ ಕನ್ನಡಿಗ)ಬೆಂಗಳೂರಿನ ಉತ್ತರ ಹಳ್ಳಿಯ ಆಶಾ ನಿವೇದಿತಾ ವಂಚನೆಗೊಳಗಾಗಿರುವ ಮಹಿಳೆ. ಇವರು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಪರಿಚಿತನೊಬ್ಬ ಶೇರ್ ಆ್ಯಪ್ ಬಗ್ಗೆ ತಿಳಿಸಿದ್ದ. ಲೈಕ್ ಶೇರ್ ಆ್ಯಪ್ ಪ್ರತಿನಿಧಿ ಎಂದು ಹೇಳಿಕೊಂಡ ಆತ ಆ್ಯಪ್ ಡೌನ್ ಲೋಡ್ ಮಾಡಿದ ಬಳಿಕ ನೊಂದಾಣಿ ಶುಲ್ಕ ಪಾವತಿಸಬೇಕು. ಆ್ಯಪ್ ನಲ್ಲಿ ಬರುವ ಸೂಚನೆಯಂತೆ Facebook, instagram ನಲ್ಲಿ ಸೆಲೆಬ್ರಿಟಿ ಗಳ ಪೋಟೋ ವಿಡಿಯೋ ಲೈಕ್ ಮಾಡಿ ಶೇರ್ ಮಾಡುತ್ತಾ ಬಂದರೆ ಒಂದು ಸಾವಿರದಿಂದ 60 ಸಾವಿರ ತನಕ ಹಣ ಗಳಿಸಬಹುದು ಎಂದು ನಂಬಿಸಿದ್ದ.
(ಗಲ್ಫ್ ಕನ್ನಡಿಗ)ಈತನ ಮಾತು ನಂಬಿ ಈಕೆ ಮಾತ್ರವಲ್ಲದೆ, ಇತರ 90 ಮಂದಿಯಿಂದ ಆ್ಯಪ್ ಡೌನ್ ಲೋಡ್ ಮಾಡಿಸಿ ನೋಂದಾಣಿ ಶುಲ್ಕ ಪಾವತಿಸಿದ್ದಳು . ಆರಂಭದಲ್ಲಿ ಸ್ವಲ್ಪ ಹಣ ಬಂದದ್ದು ಬಿಟ್ಟರೆ ಮತ್ತೆ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಹೀಗೆ ಮಹಿಳೆ ಮತ್ತು ಇತರರು ಒಟ್ಟು 28.51 ಲಕ್ಷ ರೂ ಕಳೆದುಕೊಂಡಿದ್ದಾರೆ. ಆಶಾ ಅವರು ನೀಡಿರುವ ದೂರಿನ ಆಧಾರದಲ್ಲಿ ಬೆಂಗಳೂರು ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ)