-->

ಮಂಗಳೂರಿಗರೆ ಎಚ್ಚರ; ಎರಡು ಬ್ಯಾಂಕ್ ಖಾತೆಯಿಂದ   ಏಕಾಏಕಿ ಮಾಯವಾಗಿದೆ ಹಣ!

ಮಂಗಳೂರಿಗರೆ ಎಚ್ಚರ; ಎರಡು ಬ್ಯಾಂಕ್ ಖಾತೆಯಿಂದ ಏಕಾಏಕಿ ಮಾಯವಾಗಿದೆ ಹಣ!
(ಗಲ್ಫ್ ಕನ್ನಡಿಗ)ಮಂಗಳೂರು; ಇದು ಬ್ಯಾಂಕ್ ಖಾತೆ ಹೊಂದಿರುವವರು ಎಚ್ಚರವಾಗಿರಬೇಕಾದ ಸುದ್ದಿ.. ಬ್ಯಾಂಕ್ ಖಾತೆಯಿಂದ ಹಣ ಮಾಯವಾಗುವ ಎರಡು ಪ್ರಕರಣಗಳು ಇಂದು ಮಂಗಳೂರಿನಲ್ಲಿ ವರದಿಯಾಗಿದೆ.
 
(ಗಲ್ಫ್ ಕನ್ನಡಿಗ)ಪ್ರಕರಣ 1 ; ಬೈಕಂಪಾಡಿಯಲ್ಲಿ ಯೂನಿಯನ್ ಬ್ಯಾಂಕ್ ನಲ್ಲಿ  ದಯಾನಂದ ಎಂಬವರು ಖಾತೆ ಹೊಂದಿದ್ದಾರೆ. ಇವರು ಅದೇ ಬ್ಯಾಂಕಿನ ಎಟಿಎಂ ಖಾತೆಯನ್ನು ಉಪಯೋಗಿಸುತ್ತಿದ್ದಾರೆ. ಆದರೆ ಅವರ ಗಮನಕ್ಕೆ ಬಾರದೆ ಅವರ ಖಾತೆಯಿಂದ 20 ಸಾವಿರ ನಗದು ತೆಗೆಯಲಾಗಿದೆ.

(ಗಲ್ಫ್ ಕನ್ನಡಿಗ)ಪ್ರಕರಣ 2 ; ಜಾನೆಟ್ ಡಿಸೋಜ ಎಂಬವರು ಬಲ್ಮಠದ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದಾರೆ. ಅವರು ಆ ಖಾತೆಗೆ ಸಂಬಂಧಿಸಿದಂತೆ ಎಟಿಎಂ ಕಾರ್ಡ್ ಕೂಡ ಹೊಂದಿದ್ದಾರೆ. ಆದರೆ ಅವರ ಗಮನಕ್ಕೆ ಬಾರದೆ ಅವರ ಖಾತೆಯಿಂದ 40 ಸಾವಿರ ರೂ ತೆಗೆಯಲಾಗಿದೆ.(ಗಲ್ಫ್ ಕನ್ನಡಿಗ)ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಎರಡು ಪ್ರಕರಣಗಳಲ್ಲಿ ಗ್ರಾಹಕರ ಗಮನಕ್ಕೆ ಬಾರದೆ ಹಣ ತೆಗೆದಿರುವುದು  ಬ್ಯಾಂಕ್ ಖಾತೆ ಹೊಂದಿರುವವರಲ್ಲಿ ಆತಂಕ ಸೃಷ್ಟಿಸಿದೆ.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99