
ಅಯೋಧ್ಯೆ ಮಸೀದಿಗೆ ಜ. 26 ರಂದು ಶಿಲಾನ್ಯಾಸ
(ಗಲ್ಪ್ ಕನ್ನಡಿಗ)ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಬದಲಿಯಾಗಿ ನಿರ್ಮಾಣವಾಗಲಿರುವ ಅಯೋಧ್ಯೆ ಮಸೀದಿಗೆ ಜನವರಿ 26 ರಂದು ಶಿಲಾನ್ಯಾಸ ನೆರವೇರಲಿದೆ.
(ಗಲ್ಪ್ ಕನ್ನಡಿಗ)ಗಣರಾಜ್ಯೋತ್ಸವ ದಿನವಾದ ಜನವರಿ 26 ರಂದು ಅಯೋಧ್ಯೆಯಲ್ಲಿ ಮಸೀದಿಗೆ ಶಂಕುಸ್ಥಾಪನೆ ನಡೆಸಲು ಟ್ರಸ್ಟ್ ನಿರ್ಧರಿಸಿದೆ ಎಂದು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಢೇಶನ್ (ಐಐಸಿಎಫ್) ಕಾರ್ಯದರ್ಶಿ ಅಥಾರ್ ಹುಸೈನ್ ತಿಳಿಸಿದ್ದಾರೆ.
(ಗಲ್ಪ್ ಕನ್ನಡಿಗ)ಅಯೋಧ್ಯೆ ಮಸೀದಿಗೆ ತಯಾರಿಸಲಾದ ನೀಲನಕ್ಷೆ ಡಿ. 19 ರಂದು ಅನಾವರಣಗೊಳ್ಳಲಿದೆ. ಮಸೀದಿಯೊಳಗೆ ಒಂದು ಬಾರಿಗೆ ಎರಡು ಸಾವಿರ ಮಂದಿ ಸೇರುವ ಸಾಮರ್ಥ್ಯವಿರಲಿದೆ. ಮಸೀದಿಯ ವಿನ್ಯಾಸವು ದುಂಡಾಕಾರದಲ್ಲಿರಲಿದೆ ಎಂದು ಮಸೀದಿಯ ವಾಸ್ತುಶಿಲ್ಪಿ ಅಖ್ತರ್ ಅವರು ತಿಳಿಸಿದ್ದಾರೆ.
(ಗಲ್ಪ್ ಕನ್ನಡಿಗ)