ಉಜಿರೆ 8 ವರ್ಷದ ಬಾಲಕನ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ; 48 ಗಂಟೆಯೊಳಗೆ ಬಾಲಕನನ್ನು ರಕ್ಷಿಸಿದ ಪೊಲೀಸರು
Saturday, December 19, 2020
(ಗಲ್ಪ್ ಕನ್ನಡಿಗ)ಮಂಗಳೂರು; ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ 8 ವರ್ಷದ ಬಾಲಕನ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದೆ.
(ಗಲ್ಪ್ ಕನ್ನಡಿಗ)ಬಾಲಕನ ಅಪಹರಣ ನಡೆದ 48 ಗಂಟೆಯೊಳಗೆ ಪೊಲೀಸರು ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋಲಾರದಲ್ಲಿ ಬಾಲಕನನ್ನು ರಕ್ಷಿಸಿರುವ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
(ಗಲ್ಪ್ ಕನ್ನಡಿಗ)ಉಜಿರೆಯಲ್ಲಿ ಡಿಸೆಂಬರ್ 17 ರ ಸಂಜೆ ಉದ್ಯಮಿ ಬಿಜೋಯ್ ಎಂಬವರ ಎಂಟು ವರ್ಷದ ಮಗ ಅನುಭವ್ (8)ನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಂಧಿಸಿದ್ದರು. ಬಂಧನ ಬಳಿಕ 100 ಬಿಟ್ ಕಾಯಿನ್ (17 ಕೋಟಿ) ಬೇಡಿಕೆ ಇರಿಸಿದವರು ಬಳಿಕ 60 ಬಿಟ್ ಕಾಯಿನ್ (10 ಕೋಟಿ) ಗೆ ಬೇಡಿಕೆ ಇರಿಸಿದ್ದರು.
(ಗಲ್ಪ್ ಕನ್ನಡಿಗ)ಅಪಹರಣ ಬಳಿಕ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಬಾಲಕನನ್ನು ಕೋಲಾರದಲ್ಲಿ ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಕೋಲಾರದ ಮಾಲೂರಿನ ಮಾಸ್ತಿ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಕೂರ್ನಹೊಸಳ್ಳಿ ಗ್ರಾಮದಲ್ಲಿ ಮಂಜುನಾಥ್ ಎಂಬವರ ಮನೆಯೊಂದರಲ್ಲಿ ಬಾಲಕನನ್ನು ಅಪಹರಿಸಿಡಲಾಗಿತ್ತು. ಕೋಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ಮಂಗಳೂರು ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.
(ಗಲ್ಪ್ ಕನ್ನಡಿಗ)ಆರೋಪಿಗಳನ್ನು ಇಂದು ಮಧ್ಯಾಹ್ನ 11 ಗಂಟೆ ವೇಳೆಗೆ ಕೋಲಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಕರೆತರಲಾಗುತ್ತದೆ.
(ಗಲ್ಪ್ ಕನ್ನಡಿಗ)