ಉಜಿರೆ; 8 ವರ್ಷದ ಬಾಲಕನ ಅಪಹರಿಸಿ 17 ಕೋಟಿ ಬೇಡಿಕೆಯಿಟ್ಟ ದುಷ್ಕರ್ಮಿಗಳು!
Friday, December 18, 2020
(ಗಲ್ಫ್ ಕನ್ನಡಿಗ)ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ
ಉಜಿರೆಯಲ್ಲಿ 8 ವರ್ಷದ ಬಾಲಕನ ಅಪಹರಣ ಮಾಡಿದ ದುಷ್ಕರ್ಮಿಗಳು 17 ಕೋಟಿ ರೂ ಗಳ ಬೇಡಿಕೆ ಇರಿಸಿದ್ದಾರೆ.
(ಗಲ್ಫ್ ಕನ್ನಡಿಗ)ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ರಥಬೀದಿಯ ಅಶ್ವತ್ಥ ಕಟ್ಟೆ ಸಮೀಪದ ನಿವಾಸಿ ಉದ್ಯಮಿ ಬಿಜೋಯ್ ಏಜೆನ್ಸಿಸ್ ಮಾಲಕ ಬಿಜೋಯ್ ಎಂಬವರ ಪುತ್ರ ಅನುಭವ್ (8) ನನ್ನು ದುಷ್ಕರ್ಮಿಗಳು ಅಪಹರಿಸಿದ್ದರು.
(ಗಲ್ಫ್ ಕನ್ನಡಿಗ)ನಿನ್ನೆ (ಡಿ.17) ಸಂಜೆ ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ 4 ಮಂದಿ ದುಷ್ಕರ್ಮಿಗಳು ಸೇರಿ ಬಾಲಕನನ್ನು ಅಪಹರಿಸಿದ್ದರು, 17 ಕೋಟಿ ರೂ. ನೀಡುವಂತೆ ಬೇಡಿಕೆಯನ್ನು ಇರಿಸಿದ್ದಾರೆ. ಈ ಕುರಿತು ಅಪಹರಣಕ್ಕೀಡಾದ ಬಾಲಕನ ಅಜ್ಜ ಎ.ಕೆ. ಶಿವನ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
(ಗಲ್ಫ್ ಕನ್ನಡಿಗ)ಶಿವನ್ ಅವರು ಸಂಜೆ ವಾಕಿಂಗ್ ಹೋಗಿದ್ದ ಸಂದರ್ಭದಲ್ಲಿ ಮೊಮ್ಮಗನನ್ನು ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಅಪಹರಿಸಿದ್ದನ್ನು ನೋಡಿದ್ದಾರೆ. ಶಿವನ್ ಅವರು ಕಾರನ್ನು ತಡೆಯಲು ಪ್ರಯತ್ನಿಸಿದರಾದರೂ ದುಷ್ಕರ್ಮಿಗಳು ಪರಾರಿಯಾಗಲು ಯಶಸ್ವಿಯಾಗಿದ್ದಾರೆ. ಬಳಿಕ ದುಷ್ಕರ್ಮಿಗಳು ಬಾಲಕನ ತಾಯಿ ಗೆ ಪೋನ್ ಮಾಡಿ ಮಗನನ್ನು ಬಿಡಿಸಲು 100 ಬಿಟ್ ಕಾಯಿನ್ (17 ಕೋಟಿ ರೂ) ಬೇಡಿಕೆ ಇಟ್ಟಿದ್ದಾರೆ.
(ಗಲ್ಫ್ ಕನ್ನಡಿಗ)