ಬೆಳ್ತಂಗಡಿಯಲ್ಲಿ 8 ವರ್ಷದ ಬಾಲಕನ ಅಪಹರಣ
Thursday, December 17, 2020
ಮಂಗಳೂರು: ಬೆಳ್ತಂಗಡಿಯಲ್ಲಿ ಎಂಟು ವರ್ಷದ ಬಾಲಕನನ್ನು ದುಷ್ಕರ್ಮಿಗಳು ಅಪಹರಣ ಮಾಡಿದ ಘಟನೆ ನಡೆದಿದೆ.
ಉಜಿರೆಯ ಉದ್ಯಮಿಯ ಮಗನನ್ನು ಅಪಹರಣ ಮಾಡಲಾಗಿದ್ದು ಈ ಘಟನೆ ಸಂಜೆ 6.30 ರ ಸಮಯಕ್ಕೆ ನಡೆದಿದೆ. ಬಾಲಕ ಉಜಿರೆಯ ರಥಬೀದಿಯ ಸಮೀಪ ಆಟವಾಡುತ್ತಿದ್ದ ವೇಳೆ ದುಷ್ಕರ್ಮಿಗಳು ಅಪಹರಣ ಮಾಡಿದ್ದಾರೆ. ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರು ಬಾಲಕನನ್ನು ಅಪಹರಣ ಮಾಡಿದ್ದು ಚಾರ್ಮಾಡಿ ರಸ್ತೆ ಮೂಲಕ ತೆರಳಿದ್ದಾರೆ ಎಂದು ತಿಳಿದುಬಂದಿದೆ