
ಬಿಜೆಪಿಯವರು ಚುನಾವಣಾ ಪ್ರಚಾರಕ್ಕೆ ಬಂದರೆ ಉಗ್ರ ಗೋಡೆಬರಹ ಬರೆದವರನ್ನು ಬಂಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿ ವಾಪಾಸು ಕಳುಹಿಸಿ; ಖಾದರ್ (video)
Sunday, November 29, 2020
(ಗಲ್ಫ್ ಕನ್ನಡಿಗ)ಮಂಗಳೂರು; ಗ್ರಾಮಪಂಚಾಯತ್ ಚುನಾವಣೆಗೆ ಬಿಜೆಪಿಯವರು ಮನೆ ಮನೆಗೆ ಪ್ರಚಾರಕ್ಕೆ ಬಂದಾಗ ಉಗ್ರ ಗೋಡೆ ಬರಹ ಬರೆದವರನ್ನು ಬಂಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿ ವಾಪಾಸು ಕಳುಹಿಸಿ ಎಂದು ಮಾಜಿ ಸಚಿವ ಯು ಟಿ ಖಾದರ್ ಕರೆ ನೀಡಿದ್ದಾರೆ.
(ಗಲ್ಫ್ ಕನ್ನಡಿಗ)ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹಗಳು ಕಾಣಿಸಿಕೊಂಡಿರುವುದು ಖಂಡನೀಯ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಇದನ್ನು ಯಾರೆ ಮಾಡಿದರೂ ಸಹಿಸಲು ಸಾಧ್ಯವಿಲ್ಲ. ಇದರ ಆರೋಪಿಗಳನ್ನು 15 ದಿನದೊಳಗೆ ಬಂಧಿಸದಿದ್ದರೆ ಜಿಲ್ಲಾದಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
(ಗಲ್ಫ್ ಕನ್ನಡಿಗ)ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಇದರ ಹಿಂದೆ ಯಾರಿದ್ದಾರೆ ಎಂದು ರಾಜ್ಯದ ಜನತೆಗೆ ಬಿಜೆಪಿ ಸರಕಾರ ಮತ್ತು ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕು. ಮಂಗಳೂರು ನಗರದಲ್ಲಿ ಬರೆಯಲು ಇವರಿಗೆ ಯಾವ ಧೈರ್ಯ ಬೇಕು?. ಇವರಿಗೆ ಯಾರು ಬೆಂಬಲ ಇದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಇದಕ್ಕೆ ತಾರ್ಕಿಕ ಅಂತ್ಯ ಹಾಕಬೇಕು ಎಂದರು.
(ಗಲ್ಫ್ ಕನ್ನಡಿಗ)ಈ ರೀತಿ ಬರೆದ ದೇಶದ್ರೋಹಿಗಳನ್ನು ಪತ್ತೆಹಚ್ಚಿ ಅವರನ್ನು ಬೇರೆ ದೇಶಕ್ಕೆ ಕಳುಹಿಸಬೇಕು. ಅವರಿಗೆ ನಮ್ಮ ನೆಲದಲ್ಲಿ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.
(ಗಲ್ಫ್ ಕನ್ನಡಿಗ)