ಕ್ರಿಕೆಟ್ ಗ್ರೌಂಡ್ ನಲ್ಲಿ ಅರಳಿದ ಪ್ರೀತಿ, ಭಾರತೀಯನಿಂದ ಆಸೀಸ್ ಗೆಳತಿಗೆ ಪ್ರಪೋಸ್, ಸಿಹಿಮುತ್ತು (video)
ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಪ್ರೇಮ ನಿವೇದನೆಯೊಂದು ಸುದ್ದಿ ಮಾಡಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾರತ ಮೂಲದ ಯುವಕ ಆಸ್ಟ್ರೇಲಿಯಾದ ತನ್ನ ಗೆಳತಿಯ ಮುಂದೆ ಪ್ರೇಮನಿವೇದನೆ ಮಾಡಿಕೊಂಡಿದ್ದಾನೆ. ಎರಡನೇ ಇನ್ನಿಂಗ್ಸ್ ನಲ್ಲಿ 20 ಓವರ್ ಗಳು ಪೂರ್ಣಗೊಂಡ ಬಳಿಕ ನಡೆದ ಈ ಘಟನೆ ಮೈದಾನದ ದೊಡ್ಡ ಸ್ಕ್ರೀನ್ ನಲ್ಲಿ ಲೈವ್ ಆಗಿ ಟೆಲಿಕಾಸ್ಟ್ ಆಗಿದೆ. ಗೆಳೆಯನ ಪ್ರೇಮ ನಿವೇದನೆ ಕಂಡು ಆಶ್ಚರ್ಯಗೊಂಡ ಯುವತಿ ನಾಚುತ್ತಲೆ ಒಪ್ಪಿಗೆ ಸೂಚಿಸಿದ್ದಾಳೆ. ಜೋಡಿಗಳು ಅಲ್ಲೆ ಸಿಹಿಮುತ್ತು ವಿನಿಮಯ ಮಾಡಿಕೊಂಡಿದ್ದಾರೆ. ಈ ವೇಳೆ ಮೈದಾನದಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಆಸೀಸ್ ಕ್ರಿಕೆಟಿಗ ಮ್ಯಾಕ್ಸ್ ವೆಲ್ ಚಪ್ಪಾಳೆ ತಟ್ಟುವ ಮೂಲಕ ನವ ಜೋಡಿಯನ್ನು ಅಭಿನಂದಿಸಿದರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Was this the riskiest play of the night? 💍
— cricket.com.au (@cricketcomau) November 29, 2020
She said yes - and that's got @GMaxi_32's approval! 👏 #AUSvIND pic.twitter.com/7vM8jyJ305