
ಮಂಗಳೂರು ; ಮತ್ತೊಂದು ಗೋಡೆ ಬರಹ ಪತ್ತೆ- ಈ ಬಾರಿ ಎಚ್ಚರಿಕೆ!
Saturday, November 28, 2020
(ಗಲ್ಫ್ ಕನ್ನಡಿಗ)ಮಂಗಳೂರು; ಕದ್ರಿ ಬೆಟ್ಟ ಗುಡ್ಡೆಯಲ್ಲಿ ಲಷ್ಕರ್ ಜಿಂದಾಬಾದ್ ಎಂದು ಗೋಡೆಬರಹ ಬರೆದ ದುಷ್ಕರ್ಮಿಗಳ ತಂಡ ಕೋರ್ಟ್ ಬಳಿಯು ಆಕ್ಷೇಪಾರ್ಹ ಬರಹ ಬರೆದಿರುವ ಘಟನೆ ವರದಿಯಾಗಿದೆ.
(ಗಲ್ಫ್ ಕನ್ನಡಿಗ)ಕೊಡಿಯಾಲ್ ಬೈಲ್ ನಲ್ಲಿರುವ ಕೋರ್ಟ್ ರಸ್ತೆಯಲ್ಲಿ ಇರುವ ಹಳೆಯ ಪೊಲೀಸ್ ಔಟ್ ಪೋಸ್ಟ್ ಗೋಡೆ ಮೇಲೆ ಎಚ್ಚರಿಕೆ ಬರಹ ಬರೆಯಲಾಗಿದೆ. ಉರ್ದು ಭಾಷೆಯಲ್ಲಿ Gustak e rasool ek hi saza tan say juda ಎಂದು ಬರೆಯಲಾಗಿದೆ. ಇದರರ್ಥ " ...ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು" ಎಂಬುದಾಗಿದೆ. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
(ಗಲ್ಫ್ ಕನ್ನಡಿಗ)ಕದ್ರಿ ಯಲ್ಲಿ ಲಷ್ಕರ್ ಜಿಂದಾಬಾದ್ ಬರೆದ ದುಷ್ಕರ್ಮಿಗಳು ಇದನ್ನು ಬರೆದಿರಬಹುದೆಂದು ಶಂಕಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
(ಗಲ್ಫ್ ಕನ್ನಡಿಗ)