ಸರಕಾರಿ ವಾಹನದ ಮೇಲೆ ಕೂತು ಯುವತಿಯ ಪೋಟೋ ಶೂಟ್: ಸೋಷಿಯಲ್ ಮೀಡಿಯಾದಲ್ಲಿ ವೈರಲ್
Saturday, November 28, 2020
ಉತ್ತರ ಕನ್ನಡ: ಸರಕಾರಿ ವಾಹನದ ಮೇಲೆ ಕೂತು ಯುವತಿಯೊಬ್ಬಳು ವಿವಿಧ ಭಂಗಿಗಳಲ್ಲಿ ಪೋಟೋಶೂಟ್ ಮಾಡಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಲ್ಲಾಪುರ ತಾಲೂಕಿನ ಮಂಚಿಕೇರಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ವಾಹನದ ಮೇಲೆ ಈಕೆ ವಿವಿಧ ಭಂಗಿಗಳಲ್ಲಿ ಪೋಟೋ ತೆಗೆಸಿಕೊಂಡಿದ್ದಾಳೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸರಕಾರಿ ವಾಹನ ದುರ್ಬಳಕೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಎಚ್ಚೆತ್ತ ಅಧಿಖಾರಿಗಳು ಪೋಟೊ ಶೂಟ್ ಮಾಡಿಸಿಕೊಂಡವರ ವಿರುದ್ದ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ