ಕೋಟದಲ್ಲಿ ಭೀಕರ ಅಪಘಾತಕ್ಕೆ 24 ವರ್ಷದ ಯುವತಿ ಸಾವು, ಮತ್ತೋರ್ವ ಯುವತಿ ಗಂಭೀರ
(ಗಲ್ಪ್ ಕನ್ನಡಿಗ)ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದ ಭೀಕರ ಅಪಘಾತಕ್ಕೆ ಓರ್ವ ಯುವತಿ ಸಾವನ್ನಪ್ಪಿದ್ದು ಮತ್ತೋರ್ವ ಯುವತಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಗಲ್ಪ್ ಕನ್ನಡಿಗ)ಕೋಟದ ರಾಷ್ಟ್ರೀಯ ಹೆದ್ದಾರಿ ಕೃಷ್ಣಭವನ ಹೋಟೆಲ್ ಎದುರುಗಡೆ ಈ ಅಪಘಾತ ಸಂಭವಿಸಿದೆ. ಇಬ್ಬರು ಯುವತಿಯರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದು ಇವರ ವಾಹನಕ್ಕೆ ಫಾರ್ಚುನರ್ ಕಾರು ಢಿಕ್ಕಿ ಹೊಡೆದಿದೆ. ಅಪಘಾತದಿಂದ ಕುಂದಾಪುರ ತಾಲೂಕಿನ ಬೇಳೂರು ನಿವಾಸಿ ಶ್ರೇಯಾ ಶಾನುಭಾಗ್ (24) ಸಾವನ್ನಪ್ಪಿದ್ದಾರೆ. ಈಕೆಯೊಂದಿಗೆ ಸಹಸವಾರೆಯಾಗಿದ್ದ ಉಜಿರೆ ಮೂಲದ ಪ್ರಜ್ಞಾ(25) ಗಂಭೀರವಾಗಿ ಗಾಯಗೊಂಡಿದ್ದಾರೆ.
(ಗಲ್ಪ್ ಕನ್ನಡಿಗ)ಈ ಇಬ್ಬರು ಯುವತಿಯರು ಕುಂದಾಪುರದಿಂದ ಉಡುಪಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಫಾರ್ಚೂನರ್ ಕಾರು ಢಿಕ್ಕಿ ಹೊಡೆದಿದೆ. ಫಾರ್ಚುನರ್ ಕಾರು ಚಾಲಕ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ್ದು ಈ ಸಂದರ್ಭದಲ್ಲಿ ಕೋಟದ ಜೀವನ ಮಿತ್ರ ಆಂಬುಲೆನ್ಸ್ ಮಾಲೀಕ ನಾಗರಾಜ್ ಪುತ್ರನ್ ಅವರು ಕಾರನ್ನು ಸಾಸ್ತಾನ ಟೋಲ್ ಗೆಟ್ ಬಳಿ ತಡೆದು ಕೋಟ ಪೊಲೀಸರಿಗೆ ಒಪ್ಪಿಸಿದ್ದಾರೆ. ಅದೇ ಆಂಬುಲೆನ್ಸ್ ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಪ್ ಕನ್ನಡಿಗ)