-->
ಇಬ್ಬರು ಪುತ್ರಿಯರಿಗೆ ಲೈಂಗಿಕ ದೌರ್ಜನ್ಯ; ಆರೋಪಿ ತಂದೆಗೆ ಜೀವಮಾನ ಪರ್ಯಂತ ಶಿಕ್ಷೆ-ಉಡುಪಿಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕಟಿಸಿರುವ ಪ್ರಥಮ ಘೋರ ಶಿಕ್ಷೆ

ಇಬ್ಬರು ಪುತ್ರಿಯರಿಗೆ ಲೈಂಗಿಕ ದೌರ್ಜನ್ಯ; ಆರೋಪಿ ತಂದೆಗೆ ಜೀವಮಾನ ಪರ್ಯಂತ ಶಿಕ್ಷೆ-ಉಡುಪಿಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕಟಿಸಿರುವ ಪ್ರಥಮ ಘೋರ ಶಿಕ್ಷೆ

(ಗಲ್ಫ್ ಕನ್ನಡಿಗ)ಒಂದು ವರ್ಷಗಳ ಹಿಂದೆ ತನ್ನಿಬ್ಬರು ಪುತ್ರಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದಪ್ರಕರಣದ ಆರೋಪಿ ತಂದೆಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ ಜೀವಮಾನ ಪರ್ಯಂತ ಕಠಿಣ ಜೈಲು ಶಿಕ್ಷೆ ವಿಧಿಸಿ  ಆದೇಶ ನೀಡಿದೆ.ಉಡುಪಿಯಲ್ಲಿ ಪೋಕ್ಸೋ ಕಾಯಿದೆಯಡಿ ಪ್ರಕಟಿಸಿರುವ ಪ್ರಥಮ ಘೋರ ಶಿಕ್ಷೆ ಇದಾಗಿದೆ.

(ಗಲ್ಫ್ ಕನ್ನಡಿಗ)ಆರೋಪಿಯ  ತನ್ನ 14 ವರ್ಷ ಪ್ರಾಯದ ಕಿರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ . ಇದನ್ನು 16 ವರ್ಷ ಪ್ರಾಯದ ಹಿರಿಯ ಮಗಳು ವಿರೋಧಿಸಿದ್ದಳು. ಆದರೆ ಆರೋಪಿ ತನ್ನ ಇಬ್ಬರು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದನ್ನು ಆರಂಭಿಸಿದ್ದ 


(ಗಲ್ಫ್ ಕನ್ನಡಿಗ)ಈತನ ಪತ್ನಿ ಮಾನಸಿಕ ಖಿನ್ನರಾಗಿದ್ದು  ಬಳಿಕ ಮೃತಪಟ್ಟಿದ್ದರು.ಈ ಬಗ್ಗೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಗಮನಕ್ಕೆ ತಂದಿದ್ದು, ಅದರಂತೆ ಘಟಕದ ಕಾನೂನು ಪರಿ ವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ಯ ಅವರು ಹೆಬ್ರಿ ಠಾಣೆಯಲ್ಲಿ  2019 ಅಕ್ಟೋಬರ್ ತಿಂಗಳಿನಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. 



(ಗಲ್ಫ್ ಕನ್ನಡಿಗ)ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಸಹೋದರಿಯರು ಹಾಗೂ ದೂರುದಾರರು ಸೇರಿದಂತೆ 8 ಮಂದಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಯಾದವ್ ವನಮಾಲಾ ಆನಂದರಾವ್, ಆರೋಪಿ ತಂದೆ ನಡೆಸಿದ ಕೃತ್ಯ ಸಾಬೀತಾಗಿರುವುದಾಗಿ ಅಭಿಪ್ರಾಯಪಟ್ಟು, ಪೋಕ್ಸೋ ತಿದ್ದುಪಡಿ ಕಾಯ್ದೆ 2019ರಂತೆ ಆರೋಪಿಗೆ ಜೀವಮಾನ ಪರ್ಯಂತ ಕಠಿಣ ಜೈಲು ಶಿಕ್ಷೆ ಹಾಗೂ 15,000 ದಂಡ ವಿಧಿಸಿ ಆದೇಶ ನೀಡಿದ್ದಾರೆ.
 


(ಗಲ್ಫ್ ಕನ್ನಡಿಗ)ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷ ಕಠಿಣ ಜೈಲು ಶಿಕ್ಷೆ, ಕೊಲೆ ಬೆದರಿಕೆಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ದಂಡ ಕಟ್ಟದಿದ್ದಲ್ಲಿ‌ 1 ವರ್ಷ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ. ಒಂದನೇ ನೊಂದ ಬಾಲಕಿಗೆ 5 ಲಕ್ಷ ರೂ. ಪರಿಹಾರ ಮತ್ತು 2ನೇ ನೊಂದ ಬಾಲಕಿಗೆ 1.5 ಲಕ್ಷ ರೂ. ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಉಡುಪಿಯ ವಿಶೇಷ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

(ಗಲ್ಫ್ ಕನ್ನಡಿಗ)

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99