ಅಮಲು ಪದಾರ್ಥ ಸೇವಿಸಿ ವಾಹನ ಅಪಘಾತ ಮಾಡುವವರಿಗೆ ಖಡಕ್ ಎಚ್ಚರಿಕೆ; ದ.ಕ ಜಿಲ್ಲಾ ಪೊಲೀಸರಿಂದ ಜೀವಾವಧಿ ಶಿಕ್ಷೆ ವಿಧಿಸುವ ಪ್ರಕರಣ ದಾಖಲು!
Monday, November 30, 2020
(ಗಲ್ಫ್ ಕನ್ನಡಿಗ)ಮಂಗಳೂರು; ಅಮಲು ಪದಾರ್ಥ ಸೇವಿಸಿ ಅಪಘಾತವೆಸಗಿ ಜೀವಕ್ಕೆ ಸಂಚಕಾರ ತರುವವರಿಗೆ ಎಚ್ಚರಿಕೆಯ ಸಂದೇಶವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕರಣವೊಂದರಲ್ಲಿ ಕಲಂ 304 ಕೇಸು ದಾಖಲಿಸಿದ್ದಾರೆ.
(ಗಲ್ಫ್ ಕನ್ನಡಿಗ)ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಹುಣಸೆಕಟ್ಟೆ ಎಂಬಲ್ಲಿ ನಿನ್ನೆ (ನವೆಂಬರ್ 29) ಟಿಪ್ಪರ್ ವೊಂದು ರಾಂಗ್ ಸೈಡಿನಲ್ಲಿ ಬಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು( ಜಯರಾಮ ಮತ್ತು ಕೃಷ್ಣ ಪ್ರಸಾದ್) ಸಾವನ್ನಪ್ಪಿದ್ದರು. ಅಪಘಾತ ಪಡಿಸಿದ ಚಾಲಕ ಪರಾರಿಯಾಗಲು ಯತ್ನಿಸಿದಾಗ ವಾಹನಸಹಿತ ಆತನನ್ನು ಕಲ್ಲೇರಿ ಜನತಾಕಾಲನಿಯಲ್ಲಿ ಸಾರ್ವಜನಿಕರು ಹಿಡಿದಿದ್ದರು.
(ಗಲ್ಫ್ ಕನ್ನಡಿಗ) ಆರೋಪಿ ಚಾಲಕ ಬೆಳ್ತಂಗಡಿ ಕೊಯ್ಯೂರು ಗ್ರಾಮದ ಹರೀಶ (29) ಅಮಲು ಪದಾರ್ಥ ಸೇವಿಸಿ ಅಪಘಾತ ಎಸಗಿದ್ದ. ಈತ ಅಮಲು ಪದಾರ್ಥದ ನಶೆಯಲ್ಲಿ ವಾಹನ ಚಲಾವಣೆ ಮಾಡಿ ಇಬ್ಬರನ್ನು ಬಲಿಪಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಅಮಲು ಪದಾರ್ಥ ಸೇವಿಸಿ ವಾಹನಗಳ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಆತನ ವಿರುದ್ದ ಪುತ್ತೂರು ಸಂಚಾರ ಠಾಣಾ ಪೊಲೀಸರು ಜೀವಾವಧಿ ಶಿಕ್ಷೆ ಅಥವಾ ಹತ್ತು ವರ್ಷಗಳವರೆಗೆ ವಿಸ್ತರಿಸಬಹುದಾದ ಕೊಲೆಯಲ್ಲದ ಅಪರಾಧಿಕ ನರಹತ್ಯೆಯ ಕಲಂ 304 ಐಪಿಸಿ ಪ್ರಕರಣ ದಾಖಲಿಸಿದ್ದಾರೆ.
(ಗಲ್ಫ್ ಕನ್ನಡಿಗ)