
ಅರ್ನಬ್ ಪರ ಸಚಿವ ಸುರೇಶ್ ಕುಮಾರ್ ಬ್ಯಾಟಿಂಗ್- ಪವರ್ ಟಿವಿ ನೆನಪಿಸಿ ಎಫ್ ಬಿ ಯಲ್ಲಿ ಟಾಂಗ್!
(ಗಲ್ಪ್ ಕನ್ನಡಿಗ)ಬೆಂಗಳೂರು; ರಿಪಬ್ಲಿಕ್ ಚಾನೆಲ್ ಸಂಪಾದಕ ಅರ್ನಬ್ ಗೋಸ್ವಾಮಿ ಪರ ಫೇಸ್ ಬುಕ್ ನಲ್ಲಿ ಸಚಿವ ಸುರೇಶ್ ಕುಮಾರ್ ಬರೆದುಕೊಂಡಿರುವುದಕ್ಕೆ ಪವರ್ ಟಿವಿ ಗಾದ ಸ್ಥಿತಿಯನ್ನು ನೆನಪಿಸಿ ಟಾಂಗ್ ನೀಡಲಾಗುತ್ತಿದೆ.
(ಗಲ್ಪ್ ಕನ್ನಡಿಗ)ಸಚಿವ ಸುರೇಶ್ ಕುಮಾರ್ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ "ಅರ್ನಬ್ ಗೋಸ್ವಾಮಿ ರವರನ್ನು ಮಹಾರಾಷ್ಟ್ರ ಸರಕಾರ ನಡೆಸಿಕೊಳ್ಳುತ್ತಿರುವ ರೀತಿ ಯಾರೂ ಒಪ್ಪುವಂತಹದಲ್ಲ" ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.
(ಗಲ್ಪ್ ಕನ್ನಡಿಗ)ಈ ಫೇಸ್ ಬುಕ್ ಬರಹಕ್ಕೆ ಹಲವರು ಕರ್ನಾಟಕದಲ್ಲಿ ಬಿಜೆಪಿ ಸರಕಾರ ಪವರ್ ಟಿ ವಿ ಯನ್ನು ನಡೆಸಿಕೊಂಡ ರೀತಿಗೆ ತರಾಟೆ ವ್ಯಕ್ತಪಡಿಸಿದ್ದಾರೆ.
(ಗಲ್ಪ್ ಕನ್ನಡಿಗ)ಅವರು ಫೇಸ್ ಬುಕ್ ಪೋಸ್ಟ್ ಹಾಕಿದ 4 ಗಂಟೆಯಲ್ಲಿ ಸುಮಾರು 500 ಕಮೆಂಟ್ ಗಳು ಬಂದಿದ್ದವು. ಇದರಲ್ಲಿ ಹೆಚ್ಚಿನವು ಸುರೇಶ್ ಕುಮಾರ್ ಅವರಿಗೆ ಪವರ್ ಟಿವಿ ಯನ್ನು ಕರ್ನಾಟಕದಲ್ಲಿ ನಡೆಸಿಕೊಂಡ ರೀತಿಯನ್ನು ನೆನಪಿಸಿಕೊಳ್ಳುತ್ತಿದ್ದವು.
(ಗಲ್ಪ್ ಕನ್ನಡಿಗ)
ಇದನ್ನು ಓದಿ; ಅನ್ವಯ್ ಆತ್ಮಹತ್ಯೆ ಬಗ್ಗೆ ಸರ್ಕಾರ ಕಣ್ಮುಚ್ಚಿ ಕೂತಿದ್ದರೆ ಮಾಧ್ಯಮ ಕ್ಷೇತ್ರ ಸುರಕ್ಷಿತವೇ?: ದಿನೇಶ್ ಅಮೀನ್ ಮಟ್ಟು
ಇದನ್ನು ಓದಿ; ಆರ್ನಾಬ್ ಬಂಧನ ಪ್ರಕರಣ: ನೀವು ಪ್ರಾಮಾಣಿಕರಾಗಿದ್ದರೆ ಜನ ನಿಮ್ಮೊಂದಿಗೆ ಇರುತ್ತಾರೆ**ಪತ್ರಕರ್ತ ನವೀನ್ ಸೂರಿಂಜೆ ಲೇಖನ