ನೋಟು ಅಮಾನ್ಯೀಕರಣ: ಮೋದಿ ನಡೆಗೆ ಈಗ ನಾಲ್ಕು ವರ್ಷದ ಸಂಭ್ರಮ !
ನವೆಂಬರ್ 08 ಬಂದಿದೆ. 2016ರ ಇದೇ ದಿನ ಪ್ರಧಾನಿ ನರೇಂದ್ರ ಮೋದಿ 1000 ಮತ್ತು 500 ರೂ. ನೋಟುಗಳನ್ನು ಸಾರ್ವಜನಿಕ ಬಳಕೆಗೆ ನಿಷೇಧ ಮಾಡಿ ಆದೇಶ ಹೊರಡಿಸಿದ್ದರು. ಕೇವಲ 50 ದಿನ ಕೊಡಿ... ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಹೇಳಿದ್ದರು.
ಹೌದು, ಈ ಘಟನೆ ನಡೆದು ಇದೀಗ ನಾಲ್ಕು ವರ್ಷಗಳು ಕಳೆದು ಹೋಗಿವೆ. ನೋಟು ಅಮಾನ್ಯೀಕರಣದಿಂದ ಕಪ್ಪು ಹಣಕ್ಕೆ ಬ್ರೇಕ್ ಬಿದ್ದಿದೆಯೇ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾಗಿದೆ.
ಪ್ರಾಮಾಣಿಕ ಜನರ ಬಗ್ಗೆ ಸರ್ಕಾರಕ್ಕೆ ಅಪಾರ ಕಾಳಜಿ ಇದೆ. ಆದರೆ, ನಾನು ಅಪ್ರಮಾಣಿಕರನ್ನು ಬೆಂಬಿಡದೆ ಬಿಡೋದಿಲ್ಲ. ಕೇವಲ 50 ದಿನ ಬಿಟ್ಟು ನೋಡಿ. 70 ವರ್ಷಗಳ ಭ್ರಷ್ಟಾಚಾರಕ್ಕೆ ಕೊನೆ ಹಾಕುತ್ತೇನೆ. ನಿಮ್ಮ ಎಲ್ಲ ಸಮಸ್ಯೆಗಳು ಇಂದಿನಿಂದ ಮಾಯವಾಗಲಿದೆ ಎಂದು ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು.
ನನ್ನ ನಿರ್ಧಾರದಲ್ಲಿ ನಿಮಗೆ ಯಾವುದೇ ತಪ್ಪು ಕಂಡಲ್ಲಿ ನನ್ನನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ ಎಂದೂ ಮೋದಿ ಹೇಳಿದ್ದರು. ಭಾರತ ದೇಶದ ನನ್ನ ಪ್ರೀತಿಯ ಜನರಿಗೆ ಏನು ಬಯಸುತ್ತಾರೋ ಅದನ್ನು ನೀಡಲು ನಾನು ಬದ್ಧನಾಗಿದ್ದೇನೆ. ನೋಟು ಬ್ಯಾನ್ ಮಾಡುವ ನಿರ್ಧಾರದಿಂದ ನನಗೂ ಅಪಾರ ನೋವಾಗುತ್ತಿದೆ. ಆದರೆ, ಕೇವಲ 50 ದಿನ ಮಾತ್ರ ಸಹಿಸಿಕೊಳ್ಳಿ.. ಎಲ್ಲವೂ ಸರಿಯಾಗುತ್ತದೆ ಎಂದು ಮೋದಿ ಹೇಳಿದ್ದರು.
ಈ ಘಟನೆ ಬಳಿಕ ಆರ್ಥಿಕ ಕ್ಷೇತ್ರದಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳಾಗಿತ್ತು. ದೊಡ್ಡ ಮೌಲ್ಯದ ಚಿನ್ನ ಖರೀದಿ ಸೇರಿದಂತೆ ದೊಡ್ಡ ಮೊತ್ತದ ಖರೀದಿಗೆ ಪಾನ್ ಕಾರ್ಡ್ ಸಂಖ್ಯೆಯನ್ನು ನೀಡುವುದು ಕಡ್ಡಾಯವಾಗಿತ್ತು.