ಬಂದ್ ಮಾಡಲು ಬಂದರೆ ಕಲ್ಲು ಹೊಡೆದು ಕಳುಹಿಸಿ:ಮಂಗಳೂರಿನಲ್ಲಿ ಶ್ರೀರಿಷಿ ಕುಮಾರ ಸ್ವಾಮೀಜಿ ಹೇಳಿಕೆ
ಮಂಗಳೂರು:ಡಿಸೆಂಬರ್ 5ರ ಕನ್ನಡ ಸಂಘಟನೆಗಳ ಬಂದ್ ವಿಚಾರದ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರೀಯಿಸಿರುವ ಶ್ರೀ ರಿಷಿ ಕುಮಾರ ಸ್ವಾಮೀಜಿ ಅವರು ಬಂದ್ ಮಾಡಲು ಬಂದರೆ ಕಲ್ಲು ಹೊಡದು ಕಳುಹಿಸಿ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರತಿಯೊಂದಕ್ಕೂ ಬಂದ್, ಬಂದ್ ಎನ್ನುತ್ತೀರಲ್ಲ, ಕರ್ನಾಟಕವೇನು ನಿಮ್ಮ ಅಪ್ಪನ ಮನೆಯ ಆಸ್ತಿನಾ? ಅವರು ಕನ್ನಡದ ಹೆಸರೇಳಿ ಕಿಡಿಗೇಡಿತನ ನಡೆಸುತ್ತಿದ್ದಾರೆ.ಸಂಘಟನೆ ಹೆಸರೇಳಿ ಪುಡಿ ರೌಡಿಸಂ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಮರಾಠರಿಗೆ ಪ್ರಾಧಿಕಾರ ಕೊಟ್ಟರೆ ನಿಮಗೇನು?ನೀವು 20 ಮಂದಿ ಸೇರಿದ್ರಷ್ಟೇ ಕರ್ನಾಟಕನಾ? 6.5 ಕೋಟಿ ಜನ ನಿಮ್ಮ ಮಾತು ಕೇಳಬೇಕಾ? ಎಂದು ಪ್ರಶ್ನಿಸಿದ ಅವರು ವರುಷಕ್ಕೆ 20 ರಷ್ಟು ಹಿಂದೂ ಸಂಘಟನೆ ಕಾರ್ಯಕರ್ತರು ಸಾಯುತ್ತಿದ್ದಾರೆ.ಕನ್ನಡ ಸಂಘಟನೆಯಲ್ಲಿ ಒಬ್ಬನಾದ್ರೂ ಸತ್ತಿದ್ದೀರಾ ಎಂದರು.
ಅವನ್ಯಾವನೋ ನರಿ, ಕತ್ತೆ ತಗೊಂಡು ಬಂದು ಕೂಗಾಡ್ತಾನೆ.ಒದ್ದಾಡಿ, ಉರುಳಾಡಿ ಆಮೇಲೆ ಮನೆಗೆ ಹೋಗ್ತಾನೆ ಎಂದು ವಾಟಾಳ್ ನಾಗರಾಜ್ ಹೆಸರೇಳದೆ ವಾಗ್ದಾಳಿ ನಡೆಸಿದರು.
ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡುತ್ತಿದ್ದೇನೆ.ಇಂತವರನ್ನ ಯಾಕೆ ರಾಜ್ಯದ ಪ್ರಾಣ ತೆಗೀಲಿಕ್ಕೆ ಇಟ್ಟುಕೊಂಡಿದ್ದೀರ?ಇಂತವರನ್ನ ಸರಕಾರ ಶೂಟ್ ಮಾಡಿ ಬಿಸಾಕಲಿ.ಶಾಸ್ತ್ರ ಮತ್ತು ಶಸ್ತ್ರ ಇವೆರಡೂ ನಮ್ಮ ಸಂಸ್ಕೃತಿ ಎಂದು ತಿಳಿಸಿದರು.