
ಲವ್ ಮತ್ತು ಜೆಹಾದ್ ಒಟ್ಟಾಗಿ ಇರುವುದಿಲ್ಲ:ತೃಣಮೂಲ ಸಂಸದೆ Nusrat Jahan (video)
ನವದೆಹಲಿ: ಲವ್ ಮತ್ತು ಜೆಹಾದ್ ಒಟ್ಟಾಗಿ ಇರುವುದಿಲ್ಲ. ಲವ್ ಎನ್ನುವುದು ತುಂಬಾ ವೈಯಕ್ತಿಕವಾದದ್ದು. ಚುನಾವಣೆ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳು ಇಂತಹ ವಿಚಾರಗಳೊಂದಿಗೆ ಬರುತ್ತಾರೆ ಎಂದು ಬಿಜೆಪಿ ವಿರುದ್ದ ತೃಣಮೂಲ ಸಂಸದೆ ನುಸ್ರತ್ ಜಹಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಸೋಮವಾರ ಮಾತನಾಡಿದ ಅವರು ಯಾರೊಂದಿಗೆ ಜೀವಿಸಬೇಕೆಂಬುದು ವೈಯಕ್ತಿಕ ಆಯ್ಕೆಯಾಗಿದೆ. ಪ್ರೀತಿಯಲ್ಲಿರಿ ಮತ್ತು ಪರಸ್ಪರ ಪ್ರೀತಿಸಲು ಆರಂಭಿಸಿರಿ. ಆದರೆ ಧರ್ಮವನ್ನು ರಾಜಕೀಯಗೊಳಿಸಬೇಡಿ ಎಂದು ವಿನಂತಿಸಿದರು.
ಲವ್ ಜೆಹಾದ್ ಬಗ್ಗೆ ಬಿಜೆಪಿ ಮತ್ತು ಬಿಜೆಪಿ ಆಡಳಿತದ ರಾಜ್ಯಗಳು ಗಂಭೀರ ಸಮಸ್ಯೆ ಎಂದು ಹೇಳಿ ಲವ್ ಜೆಹಾದ್ ವಿರುದ್ದ ಕಠಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದ್ದ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರೀಯೆ ನೀಡಿದ್ದಾರೆ