ನಾದಿನಿಯನ್ನು ಕೊಂದ, ತಾನು ಸಾಯಲು ಪ್ರಯತ್ನಿಸಿದ ; ಇದಕ್ಕೆಲ್ಲ ಕಾರಣ ಇದು!
Sunday, November 15, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಬೆಂಗಳೂರಿನ ರಾಮಮೂರ್ತಿ ನಗರದ ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ ಇರುವ ಮನೆಯೊಂದರಲ್ಲಿ ಯುವತಿಯೊಬ್ಬಳನ್ನು ಆಕೆಯ ಅಕ್ಕನ ಗಂಡನೇ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾನೆ. ಆಕೆ ಸತ್ತ ಬಳಿಕ ತಾನು ಚೂರಿಯಿಂದ ಇರಿದು ಸಾಯಲು ಪ್ರಯತ್ನಿಸಿದ್ದು ಅದರಲ್ಲಿ ವಿಫಲನಾಗಿದ್ದಾನೆ
ಘಟನೆ ವಿವರ;
(ಗಲ್ಫ್ ಕನ್ನಡಿಗ)ವಿಜಯ ಕುಮಾರ್ ಎಂಬಾತ ವಿವಾಹಿತನಾಗಿದ್ದು ಈತ ಪ್ರತಿದಿನ ಕುಡಿದು ಬಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಆತನ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಎಸಗುತ್ತಿರುವ ಬಗ್ಗೆ ದೂರು ನೀಡಿದ್ದಳು.
(ಗಲ್ಫ್ ಕನ್ನಡಿಗ)ಈ ಹಿನ್ನೆಲೆಯಲ್ಲಿ ಈತ ಪತ್ನಿಯ ತಂಗಿ ಲಾವಣ್ಯ ಜೊತೆಗೆ ಮಾತನಾಡಿ ರಾಜಿ ಮಾಡುವಂತೆ ಒತ್ತಾಯಿಸಿದ್ದ. ಇದಕ್ಕೆ ಲಾವಣ್ಯ ಸಮ್ಮತಿ ನೀಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಆರೋಪಿ ವಿಜಯ್ ಲಾವಣ್ಯ ಮನೆಗೆ ಮಾತುಕತೆಗೆ ಬಂದಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಚಕಮಕಿ ನಡೆದು ಈತ ಚಾಕುವಿನಿಂದ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ.
(ಗಲ್ಫ್ ಕನ್ನಡಿಗ)ಘಟನೆ ಬಳಿಕ ಈತ ನೇಣುಬಿಗಿದು ಆತ್ಮಹತ್ಯೆ ಗೆ ಯತ್ನಿಸಿದ್ದು ವಿಫಲವಾಗಿದೆ. ಬಳಿಕ ಚಾಕುವಿನಿಂದ ತನಗೆ ಚುಚ್ಚಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಗಲ್ಫ್ ಕನ್ನಡಿಗ)