
15 ವರ್ಷದ ಹಿಂದೆ ನಾಪತ್ತೆಯಾದ ಇನ್ಸ್ ಪೆಕ್ಟರ್ ಪುಟ್ ಪಾತ್ ನಲ್ಲಿ ಪತ್ತೆ!-( video)
Sunday, November 15, 2020
(ಗಲ್ಫ್ ಕನ್ನಡಿಗ)ಗ್ವಾಲಿಯಾರ್; 15 ವರ್ಷಗಳ ಹಿಂದೆ ಇನ್ಸ್ ಪೆಕ್ಟರ್ ಆಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು ಅಚ್ಚರಿಯೆಂಬಂತೆ ಪುಟ್ ಪಾತ್ ನಲ್ಲಿ ಪತ್ತೆಯಾಗಿದ್ದಾರೆ.
(ಗಲ್ಫ್ ಕನ್ನಡಿಗ)ಮನೀಶ್ ಮಿಶ್ರಾ ಎಂಬವರು 2005 ರಲ್ಲಿ ಡಾಟಿಯಾದಲ್ಲಿ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಏಕಾಏಕಿ ನಾಪತ್ತೆಯಾಗಿದ್ದ ಇನ್ಸ್ ಪೆಕ್ಟರ್ ಎಲ್ಲಿ ಹೋಗಿದ್ದರೆಂದು ಯಾರಿಗೂ ಗೊತ್ತಿರಲಿಲ್ಲ
(ಗಲ್ಫ್ ಕನ್ನಡಿಗ)ಉಪಪೊಲೀಸ್ ವರಿಷ್ಠಾಧಿಕಾರಿಗಳಾದ ರತ್ನೇಶ್ ಸಿಂಗ್ ತೋಮರ್ ಮತ್ತು ವಿಜಯ ಸಿಂಗ್ ಎಂಬವರು ಮದುವೆ ಮಂಟಪಕ್ಕೆ ಹೋಗುತ್ತಿದ್ದ ವೇಳೆ 15 ವರ್ಷಗಳ ಹಿಂದೆ ನಾಪತ್ತೆಯಾದ ಇನ್ಸ್ ಪೆಕ್ಟರ್ ಬಿಕ್ಷುಕನಂತೆ ಪುಟ್ ಪಾತ್ ನಲ್ಲಿ ಪತ್ತೆಯಾಗಿದ್ದಾರೆ. ಇವರಿಬ್ಬರೂ 15 ವರ್ಷಗಳ ಹಿಂದೆ ಸಹೋದ್ಯೋಗಿಗಳು ಆಗಿದ್ದರು.
(ಗಲ್ಫ್ ಕನ್ನಡಿಗ)ಮನೀಶ್ ಮಿಶ್ರಾ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಬಿಕ್ಷುಕನಂತೆ ಕಾಣುವ ವ್ಯಕ್ತಿಯನ್ನು ಗುರುತು ಹಿಡಿದ ಸಹೋದ್ಯೋಗಿಗಳು ಆತನ ಹೆಸರು ಕರೆದಾಗ ಮನೀಶ್ ಮಿಶ್ರಾ ಬೆಚ್ಚಿದ್ದಾನೆ. ಪತ್ತೆಯಾದ ಮನೀಶ್ ಅವರನ್ನು ಎನ್ ಜಿ ಓ ನಡೆಸುತ್ತಿರುವ ಆಶ್ರಮಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
(ಗಲ್ಫ್ ಕನ್ನಡಿಗ)ಮನೀಶ್ ಮಿಶ್ರಾ ತೀಕ್ಷ್ಣ ಶೂಟರ್ ಮತ್ತು ಉತ್ತಮ ಕ್ರೀಡಾಪಟು ಆಗಿದ್ದು 1999 ರಲ್ಲಿ ಪೊಲೀಸ್ ಪಡೆ ಸೇರಿದ್ದರು. ಮಾನಸಿಕ ಸಮಸ್ಯೆ ಯಿಂದ ಬಳಲುತ್ತಿದ್ದ ಅವರು ಏಕಾಏಕಿ ನಾಪತ್ತೆಯಾಗಿದ್ದರು.
(ಗಲ್ಫ್ ಕನ್ನಡಿಗ)