ರಮಾನಾಥ ರೈ ವರ್ಸಸ್ ಹರಿಕೃಷ್ಣ ಬಂಟ್ವಾಳ ಗಲಾಟೆ; ಈ ಬಾರಿ ಹರಿಕೃಷ್ಣ ಬಂಟ್ವಾಳ್ ಝಾಡಿಸಿದ್ದು ಹೀಗೆ...(FULL VIDEO)
ಮಂಗಳೂರು; ಬಂಟ್ವಾಳ ಪುರಸಭೆ ಯಲ್ಲಿ ಕಾಂಗ್ರೆಸ್ ಗೆ ಅಧಿಕಾರಕ್ಕೆ ಬರಲು ಎಸ್ ಡಿ ಪಿ ಐ ಬೆಂಬಲ ನೀಡಿದ ಬಳಿಕ ಮಾಜಿ ಸಚಿವ ರಮಾನಾಥ ರೈ ಮತ್ತು ಬಿಜೆಪಿ ಮುಖಂಡ , ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ನಡುವೆ ವಾಕ್ಸಮರ ನಡೆಯುತ್ತಿದೆ. ಇಂದು ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹರಿಕೃಷ್ಣ ಬಂಟ್ವಾಳ ರಮಾನಾಥ ರೈ ವಿರುದ್ದ ಆರೋಪಗಳ ಸುರಿಮಳೆಗೈದರು. ಪತ್ರಿಕಾಗೋಷ್ಠಿಯಲ್ಲಿ ಹರಿಕೃಷ್ಣ ಬಂಟ್ವಾಳ ಮಾಡಿದ ಆರೋಪಗಳ ಮುಖ್ಯಾಂಶಗಳು
ರಮಾನಾಥ ರೈ ಆಪ್ತರಿಂದ ನನ್ನ ಪತ್ನಿಯ ಅತ್ಯಾಚಾರದ ಬೆದರಿಕೆ;
ತಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದ ಬಳಿಕ ನನಗೆ ಬೆದರಿಕೆ ಪತ್ರಗಳು ಬರುತ್ತಿದೆ. ಜೀವ ಬೆದರಿಕೆ ಮಾತ್ರವಲ್ಲದೆ ನನ್ನ ಪತ್ನಿಯನ್ನು ಅತ್ಯಾಚಾರ ಮಾಡಲಾಗುವುದು ಎಂದು ಬೆದರಿಸಲಾಗುತ್ತಿದೆ. ಈ ಪತ್ರಗಳಲ್ಲಿ ಒಂದು ಪತ್ರ ಮುಂಬೈನಿಂದ ಬಂದರೆ ಉಳಿದೆಲ್ಲವುಗಳು ಬಿಸಿರೋಡ್ ಜೋಡುಮಾರ್ಗ ಪೋಸ್ಟ್ ನಿಂದ ಬಂದಿದೆ. ರಮಾನಾಥ ರೈ ಆಪ್ತರೆ ಇಂತಹ ಪತ್ರಗಳು ಬರೆಯುತ್ತಿದ್ದಾರೆ. ಕಳೆದ ಎರಡು ತಿಂಗಳ ಹಿಂದೆಯವರೆಗೂ ಪತ್ರಗಳು ಬರುತ್ತಿದ್ದವು. ಈ ಬಗ್ಗೆ 2018 ರಲ್ಲಿಯೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ನೀಡಿದ್ದೇನೆ. ಇನ್ನು ಮುಂದೆ ಇಂತಹ ಪತ್ರ ಬಂದರೆ ರಮಾನಾಥ ರೈ ಜನ್ಮಜಾಲಾಡುತ್ತೇನೆ ಎಂದು ಎಚ್ಚರಿಸಿದರು
ಮತೀಯಶಕ್ತಿಗಳೊಂದಿಗೆ ಕೈಜೋಡಿಸುವುದಿಲ್ಲ ಎಂದಿದ್ದರು;
ರಮಾನಾಥ ರೈ ಅವರು ಅಧಿಕಾರಕ್ಕಾಗಿ ಮತೀಯ ಶಕ್ತಿಗಳೊಂದಿಗೆ ಕೈ ಜೋಡಿಸುವುದಿಲ್ಲ ಎಂದಿದ್ದರು. ಈ ಬಗ್ಗೆ ಅವರು ಹೇಳಿದ ದಾಖಲೆ ನನ್ನ ಬಳಿ ಇದೆ. ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎಸ್ ಡಿ ಪಿ ಐ ಮೈತ್ರಿ ಮಾಡಿದೆ. ಮತೀಯವಾದಿ ಪಕ್ಷ ಎಸ್ ಡಿ ಪಿ ಐ ಜೊತೆಗೆ ಮೈತ್ರಿ ಮಾಡಿ ತನ್ನ ಮಾತನ್ನು ಅವರೆ ಉಲ್ಲಂಘಿಸಿದ್ದಾರೆ. ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಸೇರಿದಂತೆ ಹಲವು ಮತೀಯ ಕೊಲೆ ಪ್ರಕರಣದಲ್ಲಿ ಎಸ್ ಡಿ ಪಿ ಐ ಶಾಮೀಲಾಗಿದೆ. ಅಂತಹ ಪಕ್ಷದ ಜೊತೆಗೆ ಕೈಜೋಡಿಸಿದ್ದಾರೆ. ಈ ಬಗ್ಗೆ ನಾನು ಭಾಷಣದಲ್ಲಿ ರಮಾನಾಥ ರೈ ಶರತ್ ಮಡಿವಾಳ ಕೊಲೆಗಾರರೊಂದಿಗೆ ಕೈಜೋಡಿಸಿದ್ದಾರೆ ಎಂದು ಹೇಳಿದ್ದೆ. ಆದರೆ ರಮಾನಾಥ ರೈ ಕೊಲೆಗಾರ ಎಂದು ನಾನು ಹೇಳಿದ್ದೆ ಎಂದು ಹೇಳಿ ನನ್ನ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ನಾನು ರಮಾನಾಥ ರೈ ಕೊಲೆಗಾರ ಎಂದು ಹೇಳಿಲ್ಲ
ಕಲ್ಲಡ್ಕ ಪ್ರಭಾಕರ ಭಟ್ ಅವರ ಕೂದಲು ಮುಟ್ಟಲು ಆಗಿಲ್ಲ, ಇನ್ನು ನನ್ನನ್ನು ಏನು ಮಾಡಲು ಸಾಧ್ಯ?
ಸಚಿವರಾಗಿದ್ದಾಗ ರಮಾನಾಥ ರೈ ಅವರು ಅಂದಿನ ಎಸ್ ಪಿ ಗೆ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಲು ಸೂಚಿಸಿದ್ದರು. ಅವರದೆ ಸರಕಾರ ಇದ್ದರೂ ಅವರ ಕೂದಲು ಮುಟ್ಟಲು ಸಾಧ್ಯವಾಗಿಲ್ಲ. ಇನ್ನೂ ನನ್ನನ್ನು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ
ರಮಾನಾಥ ರೈ ಮುಖ ಭಾರತದ್ದು, ದೇಹ ಪಾಕಿಸ್ತಾನದ್ದು!
ರಮಾನಾಥ ರೈ ಅವರು ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾಮ್ ಖಾನ್ ಒಂದೇ ತಾಯಿ ಮಕ್ಕಳು ಎಂದಿದ್ದರು. ರಮಾನಾಥ ರೈ ಅವರದು ಮುಖ ಮಾತ್ರ ಭಾರತದ್ದು, ದೇಹ ಪಾಕಿಸ್ತಾನದ್ದು ಎಂದು ನಾನು ಹೇಳುತ್ತೇನೆ ಎಂದಿದ್ದಾರೆ.
ಎಸ್ ಡಿ ಪಿ ಐ ಮತ್ತು ಕಾಂಗ್ರೆಸ್ ಗಂಡಭೇರುಂಡ ಪಕ್ಷಿಯಂತೆ!
ಎಸ್ ಡಿ ಪಿ ಐ ಮತ್ತು ಕಾಂಗ್ರೆಸ್ ಗಂಡಭೇರುಂಡ ಪಕ್ಷಿಯಂತೆ. ದೇಹ ಒಂದೇ ಆದರೆ ಮುಖ ಎರಡಿದೆ. ಅದೇ ರೀತಿಯಲ್ಲಿ ಎಸ್ ಡಿ ಪಿ ಐ ಮತ್ತು ಕಾಂಗ್ರೆಸ್ ನದು ದೇಹ ಒಂದೇ, ಮುಖ ಎರಡಿದೆ ಎಂದರು
ಕಾಂಗ್ರೆಸ್ ನಿರ್ನಾಮವಾಗಲಿದೆ, ಇನ್ನೂ ಎಸ್ ಡಿ ಪಿ ಐ ಮತ್ತು ಬಿಜೆಪಿ ನಡುವೆ ಸಮರ
ರಮಾನಾಥ ರೈ ಅವರು ಕಾಂಗ್ರೆಸ್ ಅಭ್ಯರ್ಥಿಯಾದರೆ ಕಾಂಗ್ರೆಸ್ ನಿರ್ನಾಮವಾಗಲಿದೆ. ಮುಂದೆ ಕಾಂಗ್ರೆಸ್ ಮತ್ತು ಬಿಜೆಪಿನಡುವೆ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು
ಜನಾರ್ದನ ಪೂಜಾರಿ ಸೋಲಿಸಿದ್ದು ರಮಾನಾಥ ರೈ
ಜನಾರ್ದನ ಪೂಜಾರಿ ಅವರನ್ನು ಸೋಲಿಸಿದ್ದು ನಾನು ಎಂದು ರಮಾನಾಥ ರೈ ದೂರಿದ್ದಾರೆ. ರಮಾನಾಥ ರೈ ಅವರು ತಾವು ಅಭ್ಯರ್ಥಿಯಾಗಿದ್ದಾಗ ಬೆಳಿಗ್ಗೆ 6 ಗಂಟೆಗೆ ಪ್ರಚಾರಕ್ಕೆ ಹೋಗುತ್ತಿದ್ದರು. ಜನಾರ್ದನ ಪೂಜಾರಿ ಚುನಾವಣೆಯಲ್ಲಿ 11 ಗಂಟೆಗೆ ಹೋಗುತ್ತಿದ್ದರು.
ನಾನು ತಿಂದಿಲ್ಲ, ಅವರೆ ತಿಂದದ್ದು!
ಚುನಾವಣೆಯಲ್ಲಿ ನಾನು ತಿಂದಿಲ್ಲ. ರಮಾನಾಥ ರೈ ನನಗಿಂತ 6 ತಿಂಗಳು ಚಿಕ್ಕವರು. ಅವರನ್ನು ಮತ್ತು ನನ್ನನ್ನು ನೋಡಿದರೆ ತಿಳಿಯುತ್ತದೆ ತಿಂದದ್ದು ಯಾರು ಎಂದು ಅವರು ಹೇಳಿದ್ದಾರೆ.
( ಇನ್ನಷ್ಟು ವಿಚಾರಗಳನ್ನು ನೋಡಲು ವಿಡಿಯೋ ನೋಡಿ)