ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಪ್ರಜ್ವಲ್ ಯುವಕ ಮಂಡಲ (ರಿ) ಸೂಟರ್ ಪೇಟೆ
Sunday, November 1, 2020
ಸಾಮಾಜಿಕ ಕಾರ್ಯಕ್ಕೆ ಪ್ರಜ್ವಲ್ ಯುವಕ ಮಂಡಲ (ರಿ) ಸೂಟರ್ ಪೇಟೆ ಎತ್ತಿದ ಕೈ. ಯುವ ಕಾರ್ಯಕರ್ತರ ಪಡೆಯನ್ನೇ ಕಟ್ಟಿಕೊಂಡಿರುವ ಪ್ರಜ್ವಲ್ ಯುವಕ ಮಂಡಲ ತನ್ನ ಪ್ರದೇಶದಲ್ಲಿ ಮಾಡದ ಸಮಾಜ ಸೇವೆ ಇಲ್ಲ.
ಸಮಾಜ ಸೇವೆಯಲ್ಲಿ ಸಂಘಟನೆಯಾಗಿ ಪ್ರಜ್ವಲ್ ಯುವಕ ಮಂಡಲ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ 2020ನೇ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
ಇದರ ಸಾಮಾಜಿಕ ಕಾಳಜಿಯ ಜನಪರ ಸೇವಾ ಕಾರ್ಯವನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಭಿಮಾನದ ವಿಷಯ .ಸುಮಾರು 23 ವರ್ಷಗಳ ಕಾಲ ಸಾಮಾಜಿಕ ಸ್ಪಂದನೆಯ ಕಾರ್ಯದಲ್ಲಿರುವ ಪ್ರಜ್ವಲ್ ಯುವಕ ಮಂಡಲದ ಸರ್ವ ಸದಸ್ಯರಿಗೆ ಈ ಸಂದರ್ಭದಲ್ಲಿ ಅಭಿನಂದನೆಗಳು.