ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಅಪರೂಪದ ಸಾಮಾಜ ಸೇವಕ ಸತ್ತಾರ್ ಗೂಡಿನಬಳಿ
ಜೀವರಕ್ಷಕ ಈಜುಗಾರ "ನೇತ್ರಾವತಿ ವೀರ" ಎಂದೇ ಗುರುತಿಸಲ್ಪಡುವ ಸಮಾಜ ಸೇವಕ, ಸತ್ತಾರ್ ಗೂಡಿನಬಳಿಯವರಿಗೆ, ಸಾಹಸ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಬಾರಿಯ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಹುಡುಕಿಕೊಂಡು ಬಂದಿದೆ.
ನೇತ್ರಾವತಿಯಲ್ಲಿ ಮುಳುಗಿದ ಅದೆಷ್ಟೋ ಜೀವಗಳನ್ನು ತನ್ನ ಪ್ರಾಣವನ್ನು ಲೆಕ್ಕಿಸದೆ ರಕ್ಷಿಸಿದ ಖ್ಯಾತಿ ಇವರಿಗಿದೆ,
ನೇತ್ರಾವತಿಯಲ್ಲಿ ತೇಲಿಬಂದ ವ್ಯಕ್ತಿಗಳ ಶವವನ್ನು ಹುಡುಕಲು ಅಗ್ನಿಶಾಮಕ ದಳದವರು ವಿಫಲರಾದಾಗ ಅದೆಷ್ಟೋ ಶವಗಳನ್ನು ನೇತ್ರಾವತಿಯ ಗರ್ಭದಿಂದ ಮೇಲಕ್ಕೆತ್ತಿ ತರುವ ಸಾಹಸಿಗರ ನಾಯಕನಾಗಿ ಒಂದೇ ಒಂದು ಬಾರಿಯೂ ವಿಫಲರಾಗದೆ ಯಶಸ್ವಿಯಾಗಿ ತಮ್ಮ ಕೆಲಸವನ್ನು ಪೂರ್ತಿಗೊಳಿಸುತ್ತ ಮೆರೆಯುತ್ತಿದ್ದಾರೆ
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಗೂಡಿನಬಳಿಯ ನಿವಾಸಿಯಾಗಿರುವ ಸತ್ತಾರ್ ಗೂಡಿನಬಳಿ, ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ.
ಅವರು ವೃತ್ತಿಯಲ್ಲಿ ರಿಕ್ಷಾ ಚಾಲಕ. ಸತ್ತಾರ್ ತಮ್ಮ ಸಾಹಸದೊಂದಿಗೆ, ಪ್ರಾಮಾಣಿಕತೆಯಲ್ಲೂ ಹೆಸರುವಾಸಿಯಾಗಿದ್ದಾರೆ. ಪ್ರಯಾಣಿಕರು ಮರೆತು ಬಿಟ್ಟು ಹೋದಂತಹ ಅಮೌಲ್ಯ ವಸ್ತುಗಳನ್ನು ಅವರಿಗೆ ಹಿಂದಿರುಗಿಸುವ ಮೂಲಕ ತಮ್ಮ ನಿಸ್ವಾರ್ಥ ವ್ಯಕ್ತಿತ್ವವನ್ನು ಮೆರೆದಿದ್ದಾರೆ.
ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ (HRS) ಬಂಟ್ವಾಳ ಇದರ ಕ್ಯಾಪ್ಟನ್ ಕೂಡ ಆಗಿದ್ದಾರೆ. ಒಂದು ಸಮಯದಲ್ಲಿ ಜಿಲ್ಲೆಯ ಪ್ರಖ್ಯಾತ ವಾಲಿಬಾಲ್ ಆಟಗಾರನಾಗಿ ಹೆಸರು ಗಳಿಸಿದ ಅವರು ಈಗ ವಾಲಿಬಾಲ್ ಗೆ ವಿದಾಯ ಹೇಳಿ ಸಂಪೂರ್ಣವಾಗಿ ಸಮಾಜಸೇವೆಯತ್ತ ಮುಖ ಮಾಡಿದ್ದಾರೆ.
ಸತ್ತಾರ್ ರವರಿಗೆ ಇನ್ನಷ್ಟು ಸಮಾಜಸೇವೆ ಮಾಡಲು ರಾಜ್ಯೋತ್ಸವ ಪ್ರಶಸ್ತಿ ಪ್ರೇರಣೆಯಾಗಲಿ. ಇನ್ನಷ್ಟು ಜೀವಗಳನ್ನು ಉಳಿಸುವ ಸಾಮರ್ಥ್ಯದ ಜೊತೆಗೆ ಇನ್ನಷ್ಟು ಮಂದಿಗೆ ಅವರು ಮಾದರಿಯಾಗಲಿ ಎಂಬುದು ನಮ್ಮ ಹಾರೈಕೆ.