-->

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಜಿನ್ನಪ್ಪ ಗೌಡ

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಜಿನ್ನಪ್ಪ ಗೌಡ


ಕರಾವಳಿಯಲ್ಲಿ ಪತ್ರಿಕಾರಂಗದಲ್ಲಿ ಕ್ರಾಂತಿ ಎಬ್ಬಿಸಿದ ಮುಂಗಾರು ಪತ್ರಿಕೆಯಿಂದ ವೃತ್ತಿಪರ ಜೀವನ ಆರಂಭಿಸಿದ ಜಿನ್ನಪ್ಪ ಗೌಡರು ಮೆಲು ಮಾತಿನ ಸೌಮ್ಯ ಸ್ವಭಾವದ ಹಿರಿಯ ಪತ್ರಕರ್ತರು. ಪತ್ರಿಕೋದ್ಯಮವನ್ನು ಉಸಿರಾಗಿ ಸ್ವೀಕರಿಸಿರುವ ಅವರು ಕನ್ನಡ ಅನುವಾದದಲ್ಲಿ ಪಳಗಿದವರು.

ನೂರಾರು ಮಂದಿಗೆ ಪತ್ರಿಕೋದ್ಯಮದ ಪಾಠಗಳನ್ನು ಕಲಿಸಿಕೊಂಡ ಜಿನ್ನಪ್ಪ ಅವರಲ್ಲಿ ಯಾವುದೇ ಅಹಂ ಸುಳಿಯದು. ತಾನಾಯಿತು, ತನ್ನ ಕೆಲಸವಾಯಿತು ಎಂದು ತನ್ನ ಕರ್ತವ್ಯಕ್ಕೆ ಶೇ. 100ರಷ್ಟು ನ್ಯಾಯ ಒದಗಿಸುವ ಜಿನ್ನಪ್ಪರು ಒಂದರ್ಥದಲ್ಲಿ ಪರ್ಫೆಕ್ಷನಿಸ್ಟ್..

ಕಳೆದ ಎರಡು ದಶಕಗಳಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾದ ಜಿನ್ನಪ್ಪ ಗೌಡ ಅವರಿಗೆ ಪತ್ರಿಕೋದ್ಯಮಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ 2020ನೇ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅವರ ಬಗ್ಗೆ ಹಿರಿಯ ಪತ್ರಕರ್ತ ಆರೀಫ್ ಪಡುಬಿದ್ರಿ ತನ್ನ ಫೇಸ್‌ಬುಕ್ ಗೋಡೆಯಲ್ಲಿ ಹೀಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ- "1992ರಲ್ಲಿ ಮುಂಗಾರು ಪತ್ರಿಕೆಯ ಮೂಲಕ ಪತ್ರಿಕಾ ಕ್ಷೇತ್ರದಲ್ಲಿ ವೃತ್ತಿ ಆರಂಭಿಸಿದ್ದ ಜಿನ್ನಪ್ಪ ಅವರು, ನಾನು 1996ರಲ್ಲಿ ಕನ್ನಡ ಜನಾಂತರಂಗ ಪತ್ರಿಕೆಗೆ ಸೇರುವಾಗ ಅಲ್ಲಿದ್ದರು.

ನಾನು ಪ್ರೂಫ್ ರೀಡಿಂಗ್ ಕೆಲಸ ಮಾಡುವಾಗ ಅವರು ಡೆಸ್ಕ್‌ನಲ್ಲಿ ಸೈಲೆಂಟಾಗಿ ಕೆಲಸ ಮಾಡುತ್ತಿದ್ದರು. ನಂತರ ಅವರು ಜನವಾಹಿನಿ ಸೇರಿ, ಅಲ್ಲಿಂದ ವಿಜಯ ಕರ್ನಾಟಕಕ್ಕೆ ಬಂದಿದ್ದರು. ಅತ್ಯಂತ ಸೌಮ್ಯ ಸ್ವಭಾವದ ನಮ್ಮೆಲ್ಲರ ಆತ್ಮೀಯ ಜಿನ್ನಪ್ಪಣ್ಣ ಅವರು, ಡೆಸ್ಕ್‌ನಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವಲ್ಲಿ ನಿಷ್ಣಾತರು. ನಮಗೆ ಮಾರ್ಗದರ್ಶಕರು.

ಸಾಮಾನ್ಯವಾಗಿ ಪತ್ರಿಕಾ ಕಚೇರಿಯೊಳಗೆ ಉಪಸಂಪಾದಕರಾಗಿರುವವರು, ನಾವು ವರದಿಗಾರರು ಕೊಡುವ ಸುದ್ದಿಗಳನ್ನು ತಿದ್ದಿ, ತೀಡಿ, ಒಪ್ಪ ಓರಣವಾಗಿ ಪ್ರಕಟಿಸುವವರು. ಅವರು ಹೊರಗೆ ಕಾಣಿಸುವುದಿಲ್ಲ.

ಜಿನ್ನಪ್ಪ ಅವರು ಪ್ರಶಸ್ತಿ ಬಯಸಿದವರೂ ಅಲ್ಲ, ಬಯಸುವವರೂ ಅಲ್ಲ. 26 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ಜಿನ್ನಪ್ಪಣ್ಣ ಅವರನ್ನು ಅರ್ಹವಾಗಿ ಪ್ರಶಸ್ತಿಗೆ ಆಯ್ಕೆ ಮಾಡಿದ ದಕ ಜಿಲ್ಲಾಡಳಿತ ಮತ್ತು ಅವರ ಹೆಸರನ್ನು ಶಿಫಾರಸು ಮಾಡಿದ ದಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕೃತಜ್ಞತೆಗಳು. ಜಿನ್ನಪ್ಪ ಅವರಿಗೆ ಅಭಿನಂದನೆಗಳು..

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99