ಮೂಡಬಿದಿರೆ;ಅಪ್ರಾಪ್ತ ಸ್ನೇಹಿತೆಯ ಅತ್ಯಾಚಾರ- ನಿನ್ನ ... ಪೊಟೋ ನನ್ನಲ್ಲಿದೆ ಎಂದು ಬ್ಲ್ಯಾಕ್ ಮೇಲ್ ಮಾಡಿದ ಆರೋಪಿ ಅಂದರ್!
Saturday, November 21, 2020
(ಗಲ್ಫ್ ಕನ್ನಡಿಗ)ಮಂಗಳೂರು; ತನ್ನ ಅಪ್ರಾಪ್ತ ಸ್ನೇಹಿತೆಯನ್ನು ಅತ್ಯಾಚಾರವೆಸಗಿ , ಆಕೆಯಲ್ಲಿ ನಿನ್ನ ... ನಗ್ನ ಪೊಟೋ ನನ್ನಲ್ಲಿದೆ ಎಂದು ಬೆದರಿಸುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ತಾಸೆ ವಾದಕ ಆಗಿರುವ ಸತೀಶ್ ಅಂಚನ್ ಬಂಧಿತ ಆರೋಪಿ. ತನ್ನದೇ ಊರಿನ ಅಪ್ರಾಪ್ತೆಯೊಬ್ಬಳ ಜೊತೆಗೆ ಈತ ಸ್ನೇಹ ಬೆಳೆಸಿದ್ದ.ಆಕೆಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಈತ ಕಳೆದ ಜುಲೈನಲ್ಲಿ ಕಲ್ಲಮುಂಡ್ಕೂರಿನಲ್ಲಿ ಈಕೆ ನಡೆದುಕೊಂಡು ಬರುತ್ತಿದ್ದಾಗ ತನ್ನ ರಿಕ್ಷಾದಲ್ಲಿ ಬಲವಂತವಾಗಿ ಕುಳ್ಳಿರಿಸಿ ಕಲ್ಲು ಕ್ವಾರೆಯೊಂದಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾನೆ.
(ಗಲ್ಫ್ ಕನ್ನಡಿಗ)ಈ ವಿಚಾರ ಯಾರಿಗೂ ತಿಳಿಸದಂತೆ ಆತ ಬೆದರಿಸಿದ್ದ `ನಿನ್ನ ... ಫೋಟೊ ನನ್ನಲ್ಲಿವೆ' ಎಂದು ಯುವತಿಯನ್ನು ಬ್ಲ್ಯಾಕ್‍ಮೇಲ್ ಮಾಡಿದ್ದಾನೆ. ಅಲ್ಲದೆ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಮತ್ತು ಮನೆಯವರನ್ನು ಕೊಲ್ಲುವುದಾಗಿ ಯುವಕ ಬೆದರಿಸಿದ್ದಾನೆ. ಇದೀಗ ಯುವತಿಯ ಮನೆಯವರು ನೀಡಿದ ದೂರಿನಂತೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)