-->

 ಮಂಗಳೂರು:ಬೇಡವೆಂದರೂ ಫೇಸ್ ಬುಕ್ ಫ್ರೆಂಡ್ ನಿಂದ ಬಂತು ಭಾರಿ ಮೊತ್ತದ ಗಿಪ್ಟ್ -ಪಡೆಯಲು ಹೋದಾಗ ಏನಾಯಿತು ಗೊತ್ತಾ?

ಮಂಗಳೂರು:ಬೇಡವೆಂದರೂ ಫೇಸ್ ಬುಕ್ ಫ್ರೆಂಡ್ ನಿಂದ ಬಂತು ಭಾರಿ ಮೊತ್ತದ ಗಿಪ್ಟ್ -ಪಡೆಯಲು ಹೋದಾಗ ಏನಾಯಿತು ಗೊತ್ತಾ?



(ಗಲ್ಪ್ ಕನ್ನಡಿಗ)ಮಂಗಳೂರು: ಮಂಗಳೂರಿನ ವ್ಯಕ್ತಿಯೊಬ್ಬರಿಗೆ ಫೇಸ್ ಬುಕ್ ಫ್ರೆಂಡ್ ವೊಬ್ಬರು ಗಿಪ್ಟ್ ನ ಆಮೀಷವೊಡ್ಡಿ ಭಾರಿ ದೊಡ್ಡ ಮೊತ್ತದ ಟೋಪಿ ಹಾಕಿದ್ದಾರೆ.ಮಂಗಳೂರಿನ ವ್ಯಕ್ತಿ ಫೇಸ್ ಬುಕ್ ಫ್ರೆಂಡ್ ಸಹವಾಸ ಮಾಡಿ ರೂ 14.91 ಲಕ್ಷ ರೂ ಕಳೆದುಕೊಂಡಿದ್ದಾರೆ.


ಆಗಿದ್ದೇನು?

(ಗಲ್ಪ್ ಕನ್ನಡಿಗ)ಆಗಷ್ಟ್ 5 ರಂದು ಫೇಸ್ ಬುಕ್ ನಲ್ಲಿ REANOARDO  NEIL ಎಂಬವರ ಫ್ರೆಂಡ್ಸ್ ರಿಕ್ವೆಸ್ಟ್ ಬಂದಿತ್ತು . ಅದನ್ನು ಆಕ್ಸೆಪ್ಟ್ ಮಾಡಿದ ಬಳಿಕ ಆ ವ್ಯಕ್ತಿ ಮೊಬೈಲ್ ನಂಬ್ರ ಪಡೆದು ಆಗಾಗ ಇಂಟರ್ ನೆಟ್ ಕಾಲ್ ಮಾಡುತ್ತಿದ್ದರು. ತದ ನಂತರ REANOARDO  NEIL ಎಂಬಾತ ಈ ಮಂಗಳೂರಿನ ವ್ಯಕ್ತಿಗೆ ಗಿಫ್ಟ್ ಕೊಡುವುದಾಗಿ ಹೇಳಿದ್ದು, ಇದಕ್ಕೆ ಮಂಗಳೂರಿನ ವ್ಯಕ್ತಿ ನಿರಾಕರಿಸಿದ್ದರು.


(ಗಲ್ಪ್ ಕನ್ನಡಿಗ)ಆದರೆ ಮಂಗಳೂರಿನ ವ್ಯಕ್ತಿಯ  ಮಾತನ್ನು ಕೇಳದೇ ಆತನು ಗಿಪ್ಟ್   ಕಳುಹಿಸಿರುವುದಾಗಿ ನಂಬಿಸಿದ್ದಾನೆ. ಆಗಷ್ಟ್ 25 ರಂದು ಓರ್ವ ಮಹಿಳೆಯು ಕೋರಿಯರ್ ಕಛೇರಿಯಿಂದ ಮಾತನಾಡುವುದಾಗಿ ಹೇಳಿ,  ಪಾರ್ಸೆಲ್ ನ ಬಾಬ್ತು ಮೊತ್ತ ರೂ. 32,800/- ನ್ನು ಪಾವತಿಸುವಂತೆ ತಿಳಿಸಿರುತ್ತಾರೆ. ಅದಾದ ಕೂಡಲೇ ಇನ್ನೋರ್ವ ಮಹಿಳೆಯು ಕರೆ ಮಾಡಿ ತಾನು ಡೆಲ್ಲಿ ಕಸ್ಟಮ್ ಅಧಿಕಾರಿ ಎಂದು ಪರಿಚಯಿಸಿ, ಗಿಫ್ಟ್ ನ   ಕಸ್ಟಮ್ ಫೀಸ್, ಅಕೌಂಟ್ ಅಪ್ ಡೇಟ್, ಜಿ.ಎಸ್.ಟಿ. ಇತ್ಯಾದಿ ಖರ್ಚು ನೀಡಬೇಕಾಗಿ ಹೇಳಿ ವಿವಿಧ ದಿನಾಂಕದಂದು ವಿವಿಧ ಖಾತೆಗಳಿಗೆ ಒಟ್ಟು ರೂ. 14,91,840/- ನ್ನು ಜಮಾ ಮಾಡಿಸಿ ಮೋಸಮಾಡಿದ್ದಾರೆ. ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


(ಗಲ್ಪ್ ಕನ್ನಡಿಗ)



Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99