-->

 ಕೊರೊನಾ ಹಣ 2 ಲಕ್ಷ ಕೊಡ್ತಾರಂತೆ: ಯುವಕನ ಮಾತು ನಂಬಿ ಖೆಡ್ಡಾಕ್ಕೆ ಬಿದ್ದ ಉಳ್ಳಾಲದ ಮಹಿಳೆ!

ಕೊರೊನಾ ಹಣ 2 ಲಕ್ಷ ಕೊಡ್ತಾರಂತೆ: ಯುವಕನ ಮಾತು ನಂಬಿ ಖೆಡ್ಡಾಕ್ಕೆ ಬಿದ್ದ ಉಳ್ಳಾಲದ ಮಹಿಳೆ!



(ಗಲ್ಪ್ ಕನ್ನಡಿಗ)ಮಂಗಳೂರು: ಜನರು ಯಾವ ಯಾವ ರೀತಿ ವಂಚನೆಗೊಳಗಾಗುತ್ತಾರೆ ಎಂಬುದನ್ನೆ ಊಹಿಸಲು ಅಸಾಧ್ಯ. ಮಂಗಳೂರಿನ ಉಳ್ಳಾಲದ ಮಹಿಳೆಯೊಬ್ಬರು ಕೊರೊನಾ ಸಲುವಗಿ 2 ಲಕ್ಷ ಹಣ ಸಿಗುತ್ತೆ ಎಂಬ ಯುವಕನ ಮಾತನ್ನು ನಂಬಿ 80 ಸಾವಿರ ಕಳೆದುಕೊಂಡಿದ್ದಾರೆ.


ಘಟನೆ ವಿವರ:

(ಗಲ್ಪ್ ಕನ್ನಡಿಗ)ನವೆಂಬರ್ 20 ರಂದು ಬೆಳಿಗ್ಗೆ 09-30 ಗಂಟೆಯ ಸಮಯಕ್ಕೆ ಮಹಿಳೆಯೊಬ್ಬರು ತೊಕ್ಕೊಟ್ಟು ಒಳಪೇಟೆಯ ಮೊಂತಿ ಮೆಡಿಕಲ್ ಬಳಿಯ ನ್ಯಾಯ ಬೆಲೆಯ ಅಂಗಡಿಯ ಬಳಿಯಲ್ಲಿ ಇದ್ದ ಸಮಯದಲ್ಲಿ ಸುಮಾರು 30-35 ವರ್ಷದ ಯುವಕನು ಬಂದು ಪರಿಚಯಿಸಿಕೊಂಡಿದ್ದಾನೆ. ತನ್ನ ಹೆಸರು ರಾಕೇಶ್ ತಾನು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ ಈತ ಈಗ ಕೋರೊನಾ ಸಲುವಾಗಿ ಅಸ್ಪತ್ರೆಯಲ್ಲಿ 2 ಲಕ್ಷ ರೂ ಹಣ ನೀಡುತ್ತಿದ್ದು ವಾಪಾಸು ಕಟ್ಟಲು ಇರುವುದಿಲ್ಲ ಈ ದಿನವೇ ಸಿಗುತ್ತದೆ ಈಗಲೇ ನಿಟ್ಟೆ ಅಸ್ಪತ್ರೆಗೆ ಹೋಗುವಾ ಎಂದು ಮಹಿಳೆಗೆ ಹೇಳಿದ್ದಾನೆ.

ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

(ಗಲ್ಪ್ ಕನ್ನಡಿಗ) ಆತನನ್ನು ನಂಬಿ ಆತನು ಬಂದ ರಿಕ್ಷಾದಲ್ಲಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಅಸ್ಪತ್ರೆಗೆ ಆ ಮಹಿಳೆ ಹೋಗಿದ್ದಾಳೆ. ಈಗ ಡಾಕ್ಟರಿಗೆ ಹಣ ಕೊಟ್ಟರೆ ಮಾತ್ರ ನಮಗೆ 2 ಲಕ್ಷ ಹಣ ಸಿಗುತ್ತದೆ ಎಂದು ಹೇಳಿದ್ದು, ಇದನ್ನು ನಂಬಿ ಮಹಿಳೆ ಅವರ ಕೈಯಲ್ಲಿದ್ದ 20,000/- ಹಣವನ್ನು ಆತನ ಕೈಗೆ ನೀಡಿದಾಗ ಇದು ಸಾಗಾಕುವುದಿಲ್ಲ ನಿಮ್ಮ ಬಳಿ ಇದ್ದ ಚಿನ್ನವನ್ನು ಕೊಡಿ ಬಳಿಕ ಬಿಡಿಸುವಾ ಎಂದು ಹೇಳಿದ್ದಾನೆ. 

 

  ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 4 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಪಡೆದುಕೊಂಡು ಹೋದವನು ಪರಾರಿಯಾಗಿದ್ದಾನೆ.  ಕೊರೋನಾ ಬಗ್ಗೆ ಹಣ ದೊರೆಯುವುದಾಗಿ ನಂಬಿಸಿ,ಮಹಿಳೆಯ ಚಿನ್ನದ ಕರಿಮಣಿ ಸರ ಮೌಲ್ಯ ಸುಮಾರು 60,000/- ಮತ್ತು 20,000/- ಹಣವನ್ನು ಪಡೆದುಕೊಂಡು ಈತ ಪರಾರಿಯಾಗಿದ್ದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


(ಗಲ್ಪ್ ಕನ್ನಡಿಗ)




Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99