ಸುಂದರ ಯುವತಿ ಜೊತೆಗೆ ಏಕಾಂತ: ಈ ವೈದ್ಯ ಕಳೆದುಕೊಂಡದ್ದು 31 ಲಕ್ಷ!
(ಗಲ್ಪ್ ಕನ್ನಡಿಗ)ಸುಂದರ ಯುವತಿ ಜೊತೆಗೆ ಏಕಾಂತದಲ್ಲಿದ್ದು ಮೈಮರೆತ ವೈದ್ಯನೊಬ್ಬ 31 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
(ಗಲ್ಪ್ ಕನ್ನಡಿಗ)ಮೈಸೂರಿನ ಡಾ. ಪ್ರಕಾಶ್ ಬಾಬು ಎಂಬವರು ಹನಿಟ್ರ್ಯಾಪ್ ಮೂಲಕ ಹಣ ಕಳೆದುಕೊಂಡವರು. ಇವರಿಗೆ 2019 ರಲ್ಲಿ ಅನಿತಾ ಎಂಬ ಸುಂದರ ಯುವತಿಯ ಪರಿಚಯವಾಗಿತ್ತು. ಪರಿಚಯದ ಬಳಿಕ ಇವರಿಬ್ಬರೂ ಏಕಾಂತವಾಗಿ ಕಳೆದಿದ್ದಾರೆ. ಇದನ್ನು ಗುಟ್ಟಾಗಿ ಅನಿತಾ ವಿಡಿಯೋ ಮಾಡಿಕೊಂಡಿದ್ದಳು.
(ಗಲ್ಪ್ ಕನ್ನಡಿಗ)ಬಳಿಕ ಅನಿತಾ ಪಿರಿಯಾಪಟ್ಟಣ ತಾಲೂಕು ನಿವಾಸಿಗಳಾದ ನವೀನ್, ಶಿವರಾಜು, ಹರೀಶ್, ವಿಜಿ ಎಂಬವರೊಂದಿಗೆ ಸೇರಿ ವೈದ್ಯನಿಗೆ ಬ್ಲ್ಯಾಕ್ ಮೇಲ್ ಆರಂಭಿಸಿದ್ದರೆ. ಕಳೆದ ವರ್ಷದ ಡಿಸೆಂಬರ್ ನಿಂದ ಈ ವರ್ಷದ ಅಕ್ಟೋಬರ್ ವರೆಗೆ ಇವರು ವೈದ್ಯನಿಂದ ವಿಡಿಯೋ ತೋರಿಸಿ 31 ಲಕ್ಷ 30 ಸಾವಿರ ರೂಪಾಯಿ ವಸೂಲಿ ಮಾಡಿದ್ದಾರೆ. ಆದರೂ ಇವರ ಹಣದ ದಾಹ ತೀರಿರಲಿಲ್ಲ. ಕೊನೆಗೆ ಡಾ. ಪ್ರಕಾಶ್ ಬಾಬು ಅವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಯುವತಿ ಅನಿತಾ ಸೇಇದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ
(ಗಲ್ಪ್ ಕನ್ನಡಿಗ)
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
ಇದನ್ನು ಓದಿ; ಮೂಡಬಿದಿರೆ;ಅಪ್ರಾಪ್ತ ಸ್ನೇಹಿತೆಯ ಅತ್ಯಾಚಾರ- ನಿನ್ನ ... ಪೊಟೋ ನನ್ನಲ್ಲಿದೆ ಎಂದು ಬ್ಲ್ಯಾಕ್ ಮೇಲ್ ಮಾಡಿದ ಆರೋಪಿ ಅಂದರ್!