
ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರಿಡಲು ನಳಿನ್ ಕುಮಾರ್ ಕಟೀಲ್ ಗೆ ಇಚ್ಚಾಶಕ್ತಿಯಿಲ್ಲ; ಮಿಥುನ್ ರೈ (Video)
Tuesday, November 17, 2020
(ಗಲ್ಫ್ ಕನ್ನಡಿಗ)ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರಿಡಲು ನಳಿನ್ ಕುಮಾರ್ ಕಟೀಲ್ ಗೆ ಇಚ್ಚಾಶಕ್ತಿಯಿಲ್ಲ ಎಂದು ಮಿಥುನ್ ರೈ ಟೀಕಿಸಿದ್ದಾರೆ.
(ಗಲ್ಫ್ ಕನ್ನಡಿಗ)ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ವಿಮಾನ ನಿಲ್ದಾಣವನ್ನು ಲೀಸ್ ಗೆ ಪಡೆದುಕೊಂಡ ಅದಾನಿ ಸಂಸ್ಥೆ ಅದಾನಿ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಟ್ಟಿದೆ. ಬಿಜೆಪಿ ಗೆ ಚುನಾವಣೆ ಸಂದರ್ಭದಲ್ಲಿ ಕೋಟ್ಯಾಂತರ ಸಹಾಯ ಮಾಡಿದ ಅದಾನಿ ಸಂಸ್ಥೆ ಗೆ ಗಿವ್ ಆ್ಯಂಡ್ ಟೇಕ್ ಪಾಲಿಸಿ ಬಿಜೆಪಿ ಮಾಡುತ್ತಿದೆ. ಇದನ್ನು ವಿರೋಧಿಸಿ ಕೋಟಿ ಚನ್ನಯ್ಯ ಹೆಸರಿಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಇಚ್ಛಾಶಕ್ತಿ ಇಲ್ಲ ಎಂದು ಹೇಳಿದರು.
(ಗಲ್ಫ್ ಕನ್ನಡಿಗ)ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರಿಡಲು ಆಗ್ರಹಿಸಿ ನಿರಂತರ ಹೋರಾಟ ಮಾಡಲಾಗುವುದು. ನಾಳೆ ಸಂಜೆ ಕದ್ರಿಯಿಂದ ಏರ್ ಪೋರ್ಟ್ ಗೆ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದರು.
(ಗಲ್ಫ್ ಕನ್ನಡಿಗ)ಏರ್ ಪೋರ್ಟ್ ಒಳಗಡೆ ಇದ್ದ ಪಿಲಿನಲಿಕೆ ಕಲಾಕೃತಿ ತೆಗೆದು ಆನೆ ಇಡಲಾಗಿರುವುದು ಖಂಡನೀಯ. 24 ಗಂಟೆ ಯೊಳಗೆ ಅದನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
(ಗಲ್ಫ್ ಕನ್ನಡಿಗ)