-->

ಅಬ್ದುಸ್ಸಲಾಮ್ ದೇರಳಕಟ್ಟೆಯವರ ‘ಮರೀಚಿಕೆ' ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ

ಅಬ್ದುಸ್ಸಲಾಮ್ ದೇರಳಕಟ್ಟೆಯವರ ‘ಮರೀಚಿಕೆ' ಕೃತಿಗೆ ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ

(ಗಲ್ಫ್ ಕನ್ನಡಿಗ)ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2018ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಅನಿವಾಸಿ ಬರಹಗಾರ ಅಬ್ದುಸ್ಸಲಾಮ್ ದೇರಳಕಟ್ಟೆಯವರ ‘ಮರೀಚಿಕೆ' (ಅನಿವಾಸಿಯ ತಲ್ಲಣಗಳು) ಕೃತಿ ಆಯ್ಕೆಯಾಗಿದೆ.


(ಗಲ್ಫ್ ಕನ್ನಡಿಗ)ದುಬೈ ಆರೋಗ್ಯ ಇಲಾಖೆಯ ಔಷಧಿ ವಿಭಾಗದಲ್ಲಿ ಫಾರ್ಮಸಿಸ್ಟ್ ಆಗಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ಸಲಾಮ್ ದೇರಳಕಟ್ಟೆಯವರ 'ಕುರ್ ಆನಿನಲ್ಲಿ ಕಾರುಣ್ಯದ ವಚನಗಳು' ಹಾಗೂ 'ವಿದ್ಯಾರ್ಥಿಗಳು ಮತ್ತು ವ್ಯಕ್ತಿತ್ವ ವಿಕಸನ (ಅನುವಾದ ಕೃತಿ)' ಕೃತಿಗಳು ಪ್ರಕಟಗೊಂಡಿವೆ.

(ಗಲ್ಫ್ ಕನ್ನಡಿಗ)ಪ್ರಶಸ್ತಿಯು ರೂ.10000 ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ನವೆಂಬರ್ 27ರಂದು ಮಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. 


(ಗಲ್ಫ್ ಕನ್ನಡಿಗ)ಸಾಹಿತಿಗಳಾದ ರಜಿಯಾ ಡಿ.ಬಿ., ಕಲೀಮುಲ್ಲಾ ಹಾಗೂ ಡಾ. ಝಮೀರುಲ್ಲಾಹ್ ಶರೀಫ್ ತೀರ್ಪುಗಾರರಾಗಿ ಸಹಕರಿಸಿದ್ದರು ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99