ರಾಮಮಂದಿರ ನಿರ್ಮಾಣದಲ್ಲಿ ಪ್ರಧಾನಮಂತ್ರಿ ಕೊಟ್ಟಿರುವ ಆ 2 ಐಡಿಯಾ ಏನು ಗೊತ್ತಾ? ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ ಪೇಜಾವರ ಶ್ರೀ( ವಿಡಿಯೋ ನೋಡಿ)
ಮಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಮ ನಿರ್ಮಾಣ ಟ್ರಸ್ಟ್ ನ ಸದಸ್ಯರಾಗಿರುವ ಪೇಜಾವರ ಸ್ವಾಮೀಜಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಜನರ ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿಗಳು ಎರಡು ವಿಚಾರಗಳನ್ನು ಸಮಿತಿಯ ಮುಂದಿಟ್ಟಿದ್ದಾರೆ. ರಾಮನವಮಿಯ ದಿನದಂದು ಸೂರ್ಯನ ಕಿರಣಗಳು ಶ್ರೀರಾಮ ದೇವರ ಮೂರ್ತಿಯ ಮೇಲೆ ಬೀಳುವಂತೆ ಮಾಡುವುದು ಮತ್ತು ಭಕ್ತರು ಪ್ರಾಂಗಣದಲ್ಲಿ ಕೈಮುಗಿಯುವಾಗ ಪ್ರತಿಮೆಯನ್ನು ಮುಟ್ಟಿ ಕೈಮುಗಿಯುತ್ತಿದ್ದಾರೆ ಎಂಬ ಕಲ್ಪನೆ ಬರುವಂತೆ ತ್ರಿ ಡಿ ರೂಪದಲ್ಲಿ ಮಾಡಬೇಕು ಎಂಬ ಸಲಹೆಗಳನ್ನು ಪ್ರಧಾನಮಂತ್ರಿಗಳು ನೀಡಿದ್ದು ಅದರೆಡನ್ನು ಮಾಡಲು ಸಮಿತಿಯು ಕಾರ್ಯಯೋಜನೆ ಹಾಕಿಕೊಂಡಿದೆ ಎಂದು ಅವರು ಹೇಳಿದರು.
ರಾಮಮಂದಿರ ನಿರ್ಮಾಣ ಸಂಬಂಧಿಸಿದಂತೆ ಪೇಜಾವರ ಶ್ರೀಗಳು ಹಲವು ಮಾಹಿತಿಗಳನ್ನು ನೀಡಿದ್ದು ಅದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿ