ಕೊರೊನಾ ; 8 ತಿಂಗಳ ಬಳಿಕ ಇಂದಿನಿಂದ ಕಾಲೇಜು ಆರಂಭ (video)
Tuesday, November 17, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಕೊರೊನಾ ವೈರಸ್ ಹಾವಳಿ ಬಳಿಕ ಇಂದು ಕಾಲೇಜುಗಳು ಪುನಾರರಂಭವಾಗಿದೆ.
(ಗಲ್ಫ್ ಕನ್ನಡಿಗ)ಕೊರೊನಾ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿನಿಂದ ಕಾಲೇಜು ಬಂದ್ ಆಗಿತ್ತು. ಇದೀಗ ಕೊರೊನಾ ವೈರಸ್ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಕಾಲೇಜು ತೆರೆಯಲು ಸರಕಾರ ನಿರ್ಧರಿಸಿದೆ .
(ಗಲ್ಫ್ ಕನ್ನಡಿಗ)ವಿದ್ಯಾರ್ಥಿಗಳಿಗೆ ಕಾಲೇಜುಗೆ ಬರಲು ಕಡ್ಡಾಯವಿಲ್ಲ. ಆದರೆ ಕಾಲೇಜುಗೆ ಬರುವವರು ಸರಕಾರದ ನಿಯಮಗಳನ್ನು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮೊದಲಾದವುಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.
(ಗಲ್ಫ್ ಕನ್ನಡಿಗ)ಮಂಗಳೂರಿನಲ್ಲಿ ಕಾಲೇಜು ಗೆ ಬರುವವರು ಪ್ರತಿಯೊಬ್ಬರು ಕೊರೊನಾ ಪರೀಕ್ಷೆ ಮಾಡುವುದು ಕಡ್ಡಾಯವಾಗಿದೆ. ಎಂಟು ತಿಂಗಳ ಬಳಿಕ ಕಾಲೇಜು ಆರಂಭವಾಗುತ್ತಿರುವುದರಿಂದ ಮಂಗಳೂರಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳು ಉತ್ಸಾಹದಿಂದ ಕಾಲೇಜುಗಳಿಗೆ ತೆರಳಿದರು.
(ಗಲ್ಫ್ ಕನ್ನಡಿಗ)