ಹಂಪನಕಟ್ಟೆ ರಸ್ತೆ ವಿಚಾರ- ಗೆಲ್ಲಿನ ಮೇಲೆ ಕೂತು ಮರ ಕಡಿಯುತ್ತಿರುವ ಬಿಜೆಪಿ ಆಡಳಿತ; ಮಿಥುನ್ ರೈ
Wednesday, November 11, 2020
ಮಂಗಳೂರು: ಹಂಪನಕಟ್ಟೆ ರಸ್ತೆ ಕಾಮಗಾರಿಯು ಗೆಲ್ಲಿನ ಮೇಲೆ ಕೂತು ಮರ ಕಡಿಯುತ್ತಿರುವಂತಾಗಿದೆ ಎಂದು ದ.ಕ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಆರೋಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಗಳೂರು ನಗರದಲ್ಲಿ ಸರಿಯಾದ ವ್ಯವಸ್ಥೆ ಮಾಡದೆ ಕಾಮಗಾರಿ ಆರಂಭಿಸಿ ಮಂಗಳೂರಿನ ರಸ್ತೆ ಸಂಚಾರ ಅವ್ಯವಸ್ಥೆ ಮಾಡಲಾಗಿದೆ. ವ್ಯಾಪಾರ ಚೇತರಿಸಿಕೊಳ್ಳುತ್ತಿದೆ ಎಂದಾಗ ಈ ಅವ್ಯವಸ್ಥೆ ಯಿಂದ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ಅದರ ಜೊತೆಗೆ ಮಂಗಳೂರಿನ ಹಲವು ಆಸ್ಪತ್ರೆಗಳು ಈ ಪ್ರದೇಶದಲ್ಲಿದ್ದು ತುರ್ತು ವೈದ್ಯಕೀಯ ಸೇವೆಗೂ ಪರದಾಡುವಂತಾಗಿದೆ ಎಂದರು.
ವೇದವ್ಯಾಸ ಕಾಮತ್ ಅವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಒಂದು ಬಾರಿ 9 ಕೋಟಿ ವೆಚ್ಚದಲ್ಲಿ ಕಾರ್ ಸ್ಟ್ರೀಟ್ ರಸ್ತೆ ಕಾಮಗಾರಿ ನಡೆದಿದ್ದರೂ ಮತ್ತೊಮ್ಮೆ ಸ್ಮಾರ್ಟ್ ಸಿಟಿ ಯಡಿ ಕಾಮಗಾರಿ ಮಾಡಿ ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.