
ಜನತಾ ಜನಾರ್ದನನ ಎದುರು ಅಹಂಕಾರ ನಡೆಯಲ್ಲ, ಹುಲಿಯು ಇಲ್ಲ, ಬಂಡೆಯು ಇಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (video)
ಮಂಗಳೂರು: ಜನತಾ ಜನಾರ್ದನನ ಎದುರು ಯಾವ ಅಹಂಕಾರವು ನಡೆಯಲ್ಲ, ಆತನೆದುರು ಹುಲಿಯೂ ಇಲ್ಲ, ಬಂಡೆಯು ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶಿರಾ ಹಾಗೂ ಆರ್ ಆರ್ ನಗರದ ಮತದಾರರು ಅಹಂಕಾರ ನಡೆಯೋದಿಲ್ಲ ಎಂಬ ಸಂದೇಶ ನೀಡಿದ್ದಾರೆ. ಶಿರಾದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಯಡಿಯೂರಪ್ಪ ಸರಕಾರದ ಅಭಿವೃದ್ದಿ ಕಾರ್ಯವನ್ನು ಜನರು ಒಪ್ಪುವ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸಿದ್ದಾರೆ. ಸಿಎಂ ಬಗ್ಗೆ ಮಾಜಿ ಸಿಎಂ ಅಗೌರವದಿಂದ ಮಾತನಾಡಿದರೆ ಕಾಂಗ್ರೆಸ್ ನವರು ನಾನೇ ಬಂಡೆ, ನಾನೆ ಹುಲಿಯಾ ಎಂದರು. ಆದರೆ ಈಗ ಹುಲಿಯು ಇಲ್ಲ, ಬಂಡೆಯು ಇಲ್ಲ ಎಂದು ಲೇವಡಿ ಮಾಡಿದರು