ಮೂಡಬಿದ್ರೆ ನದಿಯಲ್ಲಿ ಮುಳುಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ
(ಗಲ್ಪ್ ಕನ್ನಡಿಗ)ಮೂಡುಬಿದಿರೆ: ಮೂಡಬಿದಿರೆಯ ಕಡಂದಲೆ ಗ್ರಾಮದಲ್ಲಿ ಶಾಂಭವಿ ನದಿಗೆ ಬಿದ್ದು ನೀರುಪಾಲಾದ ಮತ್ತಿಬ್ಬರ ಮೃತದೇಹ ಇಂದು ದೊರೆತಿದೆ. ನಿನ್ನೆ ಇಬ್ಬರ ಮೃತದೇಹ ಸಿಕ್ಕಿತ್ತು.
(ಗಲ್ಪ್ ಕನ್ನಡಿಗ)ಕಂಡದಲೆ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಮದುವೆಗೆ ಬಂದಿದ್ದ ಓರ್ವ ಯುವತಿ ಮತ್ತು ಮೂವರು ಯುವಕರು ಮಂಗಳವಾರ ನೀರುಪಾಲಾಗಿದ್ದರು. ಅದೇ ದಿನವೇ ಶೋಧ ಮಾಡಿದಾಗ ಇಬ್ಬರ ಶವವು ನದಿಯಲ್ಲಿ ಪತ್ತೆಯಾಗಿತ್ತು. ಇಂದು ಮತ್ತಿಬ್ಬರ ನೀರುಪಾಲಾದ ಮತ್ತಿಬ್ಬರ ಶವವೂ ಪತ್ತೆಯಾಗಿದೆ.
(ಗಲ್ಪ್ ಕನ್ನಡಿಗ)ಕಡಂದಲೆ ಬರಿಯಡ್ಕದ ಶ್ರೀಧರ ಆಚಾರ್ಯರ ಮಗನ ಮದುವೆ ಸಮಾರಂಭಕ್ಕೆ ಬಂದಿದ್ದ ನಾಲ್ವರು ನಿನ್ನೆ ನೀರುಪಾಲಾಗಿದ್ದರು. ಮೂಡುಶೆಡ್ಡೆಯ ಹರ್ಷಿತಾ ಆಕೆಯ ಸಹೋದರ ನಿಖಿಲ್, ವೇಣೂರಿನ ಸುಭಾಸ್ ಹಾಗೂ ಬಜ್ಪೆ ಪೆರಾರಿನ ರವಿ ಆಚಾರ್ಯ ಅವರು ತುಲೆಮುಗೇರ್ ಎಂಬಲ್ಲಿ ನದಿಗೆ ಈಜಲು ಇಳಿದಿದ್ದರು. ನೀರಿನ ಆಳಕ್ಕೆ ಈಜಲು ಬಾರದೇ ನಾಲ್ವರು ನೀರುಪಾಲಾಗಿದ್ದರು.
ಹರ್ಷಿತಾ ಹಾಗೂ ಸುಭಾಸ್ ಮೃತದೇಹ ನಿನ್ನೆ ಸಾಯಂಕಾಲವೇ ಪತ್ತೆಯಾಗಿತ್ತು.ರವಿ ಆಚಾರ್ಯ ಹಾಗೂ ನಿಖಿಲ್ ಅವರ ಮೃತದೇಹವು ರಾತ್ರಿಯಾದರೂ ಪತ್ತೆಯಾಗಿರದ ಕಾರಣ, ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಬುಧವಾರ ಬೆಳಗ್ಗೆ ಕಾರ್ಯಾಚರಣೆ ಮುಂದುವರೆಸಲಾಗಿದ್ದು ಇಂದು ಇಬ್ಬರ ಶವವೂ ಪತ್ತೆಯಾಗಿದೆ. ಮೂಡುಬಿದಿರೆ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಹಾಗೂ ಮಂಗಳೂರಿನ ಮತ್ತು ಸ್ಥಳೀಯ ಈಜು ತಜ್ಞರು ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತಿದ್ದಾರೆ.
(ಗಲ್ಪ್ ಕನ್ನಡಿಗ)