ಮೂಡುಬಿದಿರೆ ಕಡಂದಲೆ ನದಿಯಲ್ಲಿ ದುರಂತ; ಈಜಲು ಹೋದ ನಾಲ್ವರು ಸಾವು
Tuesday, November 24, 2020
(ಗಲ್ಫ್ ಕನ್ನಡಿಗ)ಮೂಡುಬಿದಿರೆ: ಮೂಡಬಿದಿರೆಯ ಕಡಂದಲೆ ನದಿಯಲ್ಲಿ ಈಜಲು ಹೋದ ವೇಳೆ ನಾಲ್ವರು ಸಾವೀಗೀಡಾದ ಘಟನೆ ನಡೆದಿದೆ.
(ಗಲ್ಫ್ ಕನ್ನಡಿಗ)ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ನದಿಯಲ್ಲಿ ಈಜುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಂಗಳೂರು ತಾಲೂಕಿನ ವಾಮಂಜೂರು ಮೂಡುಶೆಡ್ಡೆ ನಿಖಿಲ್ (18) ಮತ್ತು ಹರ್ಶಿತಾ( 20), ಬೆಳ್ತಂಗಡಿ ತಾಲೂಕಿನ ವೇಣೂರಿನ ಸುಬಾಸ್(19), ಮಂಗಳೂರು ತಾಲೂಕಿನ ಬಜ್ಪೆ ಪೆರಾರದ ರವಿ (30) ಮೃತಪಟ್ಟವರು.
(ಗಲ್ಫ್ ಕನ್ನಡಿಗ) ಮೂಡುಬಿದಿರೆಯ ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಯಲ್ಲಿ ಆದಿತ್ಯವಾರ ವಿವಾಹ ಸಮಾರಂಭಕ್ಕೆ ಇವರು ಬಂದಿದ್ದರು. ಮದುವೆಗೆ ಬಂದಿದ್ದ ಇವರು ಇಲ್ಲೆ ಇದ್ದು ಇಂದು ತುಲೆಮುಗೇರ್ ಎಂಬಲ್ಲಿ ನದಿಯಲ್ಲಿ ಈಜಲು ಹೋದಾಗ ಈ ದುರ್ಘಟನೆ ನಡೆದಿದೆ.
(ಗಲ್ಫ್ ಕನ್ನಡಿಗ)