ಮಂಗಳೂರಿನಲ್ಲಿ ಮತ್ತೆ ರೌಡಿಗಳ ಅಟ್ಟಹಾಸ: ಆಸ್ಪತ್ರೆ ಮುಂಭಾಗದಲ್ಲಿಯೆ ತಲವಾರು ದಾಳಿ
(ಗಲ್ಪ್ ಕನ್ನಡಿಗ)ಮಂಗಳೂರು: ಇತ್ತೀಚೆಗೆ ಕೈಕಂಬದ ಕಂದಾವರದಲ್ಲಿ ವೆನ್ಜ್ ಅಬ್ದುಲ್ಲಾ ಅವರ ಮೇಲೆ ತಲವಾರು ದಾಳಿ ನಡೆಸಿದ ತಂಡ ಮತ್ತೆ ತನ್ನ ದುಷ್ಕೃತ್ಯವನ್ನು ಮುಂದುವರೆಸಿದೆ.
(ಗಲ್ಪ್ ಕನ್ನಡಿಗ)ಮಂಗಳೂರಿನ ಯುನಿಟಿ ಆಸ್ಪತ್ರೆಯ ಮುಂಭಾಗದಲ್ಲಿ ಇದೇ ತಂಡ ತಲವಾರು ಬೀಸಿದ್ದು ನೌಶದ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ.
(ಗಲ್ಪ್ ಕನ್ನಡಿಗ)ಇತ್ತೀಚೆಗೆ ಕಂದಾವರದಲ್ಲಿ ವೆನ್ಜ್ ಅಬ್ದುಲ್ಲಾ ಅವರ ಮೇಲೆ ದಾಳಿ ನಡೆಸಿದ ತಂಡ ಯುನಿಟಿ ಆಸ್ಪತ್ರೆ ಬಳಿ ಬಂದು ವೆನ್ಜ್ ಅಬ್ದುಲ್ಲಾ ಅವರ ಜೊತೆ ಆಸ್ಪತ್ರೆಯಲ್ಲಿದ್ದ ಇಬ್ಬರನ್ನು ಮಾತುಕತೆಗೆಂದು ಹೊರಗೆ ಕರೆಸಿಕೊಂಡಿದೆ. ಈ ವೇಳೆ ದುಷ್ಕರ್ಮಿಗಳು ತಲವಾರು ಬೀಸಿದ್ದಾರೆ ಎಂದು ತಿಳಿದುಬಂದಿದೆ. ನೌಶದ್ ಅವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಂಡೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಗಲ್ಫ್ ಕನ್ನಡಿಗ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
(ಗಲ್ಪ್ ಕನ್ನಡಿಗ)