ಯುವತಿಯ ಹೆಸರಿನ ನಕಲಿ ಫೇಸ್ ಬುಕ್ ಖಾತೆಯಲ್ಲಿ ... ಪೊಟೋಗಳ ವಿನಿಮಯ; ನಕಲಿ ಹಿರಿಯ ಪೊಲೀಸ್ ಅಧಿಕಾರಿಗಳ ಬಂಧನ!
Wednesday, November 25, 2020
(ಗಲ್ಫ್ ಕನ್ನಡಿಗ)ಮಂಗಳೂರು; ಯುವತಿಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ .... ಪೊಟೋ ವಿನಿಮಯ ಮಾಡಿಕೊಂಡು ಪೊಲೀಸ್ ಅಧಿಕಾರಿ ಎಂದು ವಂಚಿಸಲೆತ್ನಿಸಿದ ಆರೋಪಿಗಳಿಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಬೆಂಗಳೂರಿನ ಗೋಕುಲ್ ರಾಜ್ (20), ಪವನ್ (20 ) ಬಂಧಿತರು. ಇವರು ಸಾಕ್ಷಿರಾಜ್ ಎಂಬ ಮಹಿಳೆ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿದ್ದರು. ಬಳಿಕ ಮಂಗಳೂರಿನ ರಾಜೇಶ್ ಎಂಬ ವ್ಯಕ್ತಿಯನ್ನು ಫ್ರೆಂಡ್ ಮಾಡಿ ಅವರಿಗೆ ಮಹಿಳೆಯರ .... ಚಿತ್ರಗಳನ್ನು ಕಳುಹಿಸಿದ್ದಾರೆ. ಜೊತೆಗೆ ರಾಜೇಶ್ ನಲ್ಲಿಯೂ .... ಚಿತ್ರ ಕಳುಹಿಸಲು ತಿಳಿಸಿದ್ದು ರಾಜೇಶ್ ಕೂಡ ಅಂತಹದೆ ಚಿತ್ರ ಕಳುಹಿಸಿದ್ದಾರೆ.
(ಗಲ್ಫ್ ಕನ್ನಡಿಗ)ಇದರ ಬಳಿಕ ರಾಜೇಶ್ ಗೆ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಿದ್ದು , ರಾಜೇಶ್ ಹಣ ನೀಡದೆ ಇದ್ದಾಗ ತಾವು ಹಿರಿಯ ಪೊಲೀಸ್ ಅಧಿಕಾರಿ ಎಂದು ಬೆದರಿಸಿದ್ದಾರೆ. ಈ ಬಗ್ಗೆ ರಾಜೇಶ್ ದೂರು ನೀಡಿದ್ದು ಆರೋಪಿಗಳಿಬ್ಬರನ್ನು ಸೈಬರ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)