-->
ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಶ್ರೀನಿವಾಸ ನಾಯಕ್ ಇಂದಾಜೆ

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು: ಶ್ರೀನಿವಾಸ ನಾಯಕ್ ಇಂದಾಜೆ


ಮಂಗಳೂರು: ಪುತ್ತೂರು ತಾಲೂಕಿನ ಇಂದಾಜೆಯ ಶ್ರೀನಿವಾಸ ನಾಯಕ್ ಮಂಗಳೂರಿನ ದೃಶ್ಯ ಮಾಧ್ಯಮಕ್ಕೆ ಸಲ್ಲಿಸಿದ ಸೇವೆಗಾಗಿ 2020ನೇ ವರ್ಷದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಿನ್ನ ಎಂದೇ ಪತ್ರಿಕಾ ವಲಯದಲ್ಲಿ ಖ್ಯಾತಿ ಪಡೆದಿರುವ ಶ್ರೀನಿವಾಸ ನಾಯಕ್ ಇಂದಾಜೆ ದಶಕಗಳ ಕಾಲ ಕರುನಾಡಿನ ಮುಂಚೂಣಿ ಮಾಧ್ಯಮ ಸಂಸ್ಥೆ ಉದಯ ಟಿವಿಯ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು. ಕೆಲ ವರ್ಷಗಳ ಹಿಂದೆ ಸಂಸ್ಥೆಯ ಸುದ್ದಿ ವಿಭಾಗ ಮುಚ್ಚಲ್ಪಟ್ಟ ಕಾರಣಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ, ತನ್ನದೇ ಸುದ್ದಿ ಮಾಧ್ಯಮವನ್ನು ಕಟ್ಟಿ ಬೆಳೆಸುತ್ತಿರುವ ಸಿನ್ನ, ಹಲವರ ಪಾಲಿಗೆ ಆಪದ್ಬಾಂಧವರು.

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ಅವರು ಪತ್ರಕರ್ತರ ಕಲ್ಯಾಣಕ್ಕಾಗಿ ಹಲವು ಜನಪರ ಕಾರ್ಯಕ್ರಮವನ್ನು ರೂಪಿಸಿದರು. ಪತ್ರಕರ್ತರ ರಾಜ್ಯ ಸಮ್ಮೇಳನ, ಜಿಲ್ಲಾ ಮಟ್ಟದ ಸಮ್ಮೇಳನವನ್ನು ಆಯೋಜನೆಗೆ ನೇತೃತ್ವ ನೀಡಿದ್ದ ಶ್ರೀನಿವಾಸ್ ನಾಯಕ್, ರಾಜ್ಯದ ಮುಂಚೂಣಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ಒಡನಾಟ ಹೊಂದಿದ್ದರು.

ಮಂಗಳೂರು ಪೊಲೀಸ್ ಕಮಿಷನರೇಟ್ ಸ್ಥಾಪನೆಗೆ ಒತ್ತಾಸೆಯಾಗಿ ನಿಂತಿದ್ದ ಅವರು, ಕುಮಾರಸ್ವಾಮಿ ಮೊದಲ ಬಾರಿಗೆ 20-20 ಸರ್ಕಾರದ ಸಿಎಂ ಆಗಿದ್ದಾಗ, ಅವರ ಮಂಗಳೂರು ಭೇಟಿ ವೇಳೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರನ್ನು ಪರಸ್ಪರ ವಿರುದ್ಧವಾಗಿ ಒಂದೇ ಚೆಸ್ ಬೋರ್ಡ್ ನಲ್ಲಿ ನಿಲ್ಲಿಸಿ ಚೆಸ್ ಆಡಿಸಿದ್ದನ್ನು ಯಾರೂ ಮರೆಯಲಾರರು.

ಪತ್ರಕರ್ತರ ವಿನೂತನ ಗ್ರಾಮ ವಾಸ್ತವ್ಯ ಎಂಬ ಪರಿಕಲ್ಪನೆಯಲ್ಲಿ ನಗರದ ಪತ್ರಕರ್ತರನ್ನು ಹಳ್ಳಿಗಾಡಿನ ಜನಜೀವನದ ಪರಿಚಯಿಸಿ ಕುಗ್ರಾಮ ಎಂದರೆ ಏನು ಎಂಬುದನ್ನು ಪರಿಚಯಿಸಿದರು. ಮಾತ್ರವಲ್ಲದೆ, ಈ ಗ್ರಾಮಗಳ ಅಭಿವೃದ್ಧಿಗೆ ಪ್ರೇರಣೆ ನೀಡಿದರು. ಅಧಿಕಾರಿಗಳನ್ನು ಈ ಗ್ರಾಮದತ್ತ ನೋಡುವಂತೆ ಮಾಡಿದರು.

ಕಷ್ಟಪಟ್ಟು ಜೀವನದಲ್ಲಿ ಮೇಲೇರಿರುವ ಶ್ರೀನಿವಾಸ್ ನಾಯಕ್, ತನ್ನ ವಿದ್ಯಾರ್ಥಿ ಜೀವನದಲ್ಲಿ ಕೊರಿಯರ್ ಸಂಸ್ಥೆಯನ್ನು ಮುನ್ನಡೆಸಿರುವುದು ಅವರ ಸಂಘಟನಾ ಚಾತುರ್ಯಕ್ಕೆ ಸಾಕ್ಷಿ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99