-->

ದಿನೇಶ್ ಶೆಟ್ಟಿ ಅವರ ನ್ಯಾಯಪರ ಹೋರಾಟ ನಿಜಕ್ಕೂ ಮಾದರಿ- Facebook ನಲ್ಲಿ ವೈರಲ್ ಆಗಿದೆ ಮನಮಿಡಿಯುವ ಲೇಖನ

ದಿನೇಶ್ ಶೆಟ್ಟಿ ಅವರ ನ್ಯಾಯಪರ ಹೋರಾಟ ನಿಜಕ್ಕೂ ಮಾದರಿ- Facebook ನಲ್ಲಿ ವೈರಲ್ ಆಗಿದೆ ಮನಮಿಡಿಯುವ ಲೇಖನ


ಇತ್ತೀಚೆಗೆ ಮತಾಂಧರಿಂದ ಹಲ್ಲೆಗೊಳಗಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಕೊನೆಗೆ ಅಪಾಯದಿಂದ ಪಾರಾದ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ ದಿನೇಶ್ ಅವರು ನಿಜಕ್ಕೂ ನಮ್ಮೆಲ್ಲರಿಗೆ ಒಂದು ಪ್ರೇರಣೆ ಯಾಕೆಂದರೆ, ಅವರ ಇಂದಿನ ಈ ಸ್ಥಿತಿಗೆ ಕಾರಣ ಯಾವುದೋ ರೌಡಿಸಂ ಹಿನ್ನಲೆ ಅಥವಾ ಜಾಗದ ತಕರಾರಿನ ದ್ವೇಷ ಕಾರಣವಲ್ಲ ಹೊರತು ಒಂದು ಹೆಣ್ಣಿಗೆ ನಡೆದ ಅನ್ಯಾಯಕ್ಕೆ ದನಿಯಾದುದ್ದೇ ಕಾರಣ ಎಂಬುವುದು ಇಂದಿಗೂ ಮನಸ್ಸನ್ನು ಕಾಡುತ್ತಿರುವ ವಿಷಯ....

ದಿನೇಶ್ ಅವರು ತಮ್ಮ ಊರಿನ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಪ್ರಶ್ನಿಸಿ ಆ ಕುಟುಂಬದವರ ಜೊತೆ ನಿಂತು ಬಾಲಕಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಲು ಹೊರಟಿದ್ದರು. ಅವರು ಯಾರ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ ಎಂಬುವುದನ್ನು ಅವರು ಚೆನ್ನಾಗಿ ಅರಿತಿದ್ದರು ಹಾಗೂ ಇದರಿಂದ ಒಂದಲ್ಲ ಒಂದು ದಿನ ತನ್ನ ಜೀವಕ್ಕೆ ಕುತ್ತು ಬರಬಹುದು ಎಂಬ ಜ್ಞಾನವೂ ಅವರಿಗೆ ಇತ್ತು ಆದರೆ ಇದು ಯಾವುದನ್ನೂ ಲೆಕ್ಕಿಸದೆ ಅವರು ಬರೀ ಆ ಹೆಣ್ಣಿಗೆ ನ್ಯಾಯ ಕೊಡಿಸುವ ಕೆಲಸವನ್ನು ಗಮನದಲ್ಲಿಟ್ಟಿದರು ಆದರೆ ಕೊನೆಗೆ ದುರದೃಷ್ಟವಶಾತ್ ಮತಾಂಧರು ತಮ್ಮ ದ್ವೇಷವನ್ನು ಸಾಧಿಸಿಯೇ ಬಿಟ್ಟರು....

ದಿನೇಶ್ ಅವರಂತಹ ಹೀರೋಗಳನ್ನು ಸಮಾಜದಲ್ಲಿ ಎತ್ತರದ ಸ್ಥಾನದಲ್ಲಿ ಇಡಬೇಕು ಹೊರತು ಬರೀ ಸಿನೆಮಾದಲ್ಲಿ ನ್ಯಾಯ ಕೊಡಿಸುವ ನಾಟಕವನ್ನಾಡುವ ರೀಲ್ ಹೀರೋಗಳನ್ನಲ್ಲಾ....
ರೀಲ್ ಹೀರೋಗಳನ್ನು ಸನ್ಮಾನಿಸಿ ಗೌರವಿಸುವ ಬದಲು ಇಂತಹ ಮಾದರಿ ವ್ಯಕ್ತಿತ್ವಗಳನ್ನು ಗೌರವಿಸೋಣ.

ಕೊನೆಗೆ ಸಮಾಜ ಅವಲೋಕಿಸ ಬೇಕಾದದ್ದು ಇಷ್ಟೇ,
ದಿನೇಶ್ ಅವರು ಇಂದು ಇಂತಹ ಸ್ಥಿತಿ ಎದುರಿಸ ಬೇಕಾದರೆ ಅವರು ಮಾಡಿದ ಅಂತಹ ದೊಡ್ಡ ತಪ್ಪಾದರೂ ಏನು ? ಒಂದು ಹೆಣ್ಣಿಗಾದ ಅನ್ಯಾಯವನ್ನು ಪ್ರಶ್ನಿಸಿದ್ದು ಅಪರಾಧವೇ ಅಥವಾ ಹೆಣ್ಣಿನ ಮೇಲೆ ಲೈಂಗಿಕ ದರ್ಜನ್ಯ ನಡೆಸಿದ್ದು ದೊಡ್ಡ ಅಪರಾಧವೇ ? ದಿನೇಶ್ ಅವರು ನ್ಯಾಯಕ್ಕಾಗಿ ಹೋರಾಡದಿದ್ದರೆ ಈ ಘಟನೆ ಸಮಾಜದ ಮುಂದೆ ಬರಲು ಸಾಧ್ಯವಿರಲಿಲ್ಲ ಹಾಗಿದ್ದಲ್ಲಿ ಇಂತಹ ಬೆಳಕಿಗೆ ಬಾರದ ಅದೆಷ್ಟು ಘಟನೆ ನಡೆದಿರಬೇಕು? ನಮ್ಮ ಸಮಾಜ ಇನ್ನು ಎಷ್ಟು ದಿನವೆಂದು ಇಂತಹ ಕೃತ್ಯಗಳನ್ನು ನೋಡಿಯೂ ನೋಡದಂತೆ ಬದುಕುತ್ತದೆ ? ದ್ವೇಷ-ಲಾಭದ ಲೆಕ್ಕಾಚಾರವನ್ನು ಬದಿಗಿಟ್ಟು ಹಿಂದೂಗಳು ಇನ್ನಾದರೂ ಒಗ್ಗಟ್ಟಿನಿಂದ ಬಾಳಬೇಕೆಂಬ ಕಿಂಚಿತ್ತು ಯೋಚನೆಯಾದರೂ ಮಾಡಬಹುದೇ ? ನಾವಾಯಿತು ನಮ್ಮ ಮನೆಯವರಾಯಿತು ಎಂಬ ಕಲ್ಪನೆಯಿಂದ ಹೊರ ಬಂದು ಸಮಾಜದ ಬಗ್ಗೆ ಯೋಚಿಸಲು ಪ್ರಾರಂಭಿಸಬಹುದೇ ? 
ನಮ್ಮ ಊರು-ಕೇರಿಯಲ್ಲಿ ಇಂತಹ ಘಟನೆ ನಡೆಯುವವರೆಗೆ ಕಾದು ಕುಳಿತುಕೊಳ್ಳುವ ಆಲೋಚನೆಯೇ.......!

ಹಿಂದೂ-ಒಂದು ಆಗುವ ಕಾಲ ಸನ್ನಿಹಿತ ವಾಗಿದೆ.

Ads on article

Advertise in articles 1

advertising articles 2

Advertise under the article

  

  

  

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay Rs 99