ಮಂಗಳೂರಿನಲ್ಲಿ 25 ವರ್ಷದ ಯುವತಿ ನಾಪತ್ತೆ !
Tuesday, November 3, 2020
(ಗಲ್ಫ್ ಕನ್ನಡಿಗ)ಮಂಗಳೂರು : 25 ವರ್ಷ ಪ್ರಾಯದ ಯುವತಿಯೊಬ್ಬಳು ಮಂಗಳೂರಿನ ಕಿನ್ನಿಗೋಳಿಯ ಮನ್ನಬೆಟ್ಟು ಗ್ರಾಮದಿಂದ ನಾಪತ್ತೆಯಾಗಿದ್ದಾಳೆ.
ಇಲ್ಲಿನ ಮುಂಚಿಕಾಡಿನ ನಿವಾಸಿ ಪ್ರೀತಿ (25) ನಾಪತ್ತೆಯಾದ ಯುವತಿ. ಈಕೆ ನ.1 ರಂದು ಬ್ಯಾಂಕಿಗೆ ಹಣ ಕಟ್ಟಲು ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.
(ಗಲ್ಫ್ ಕನ್ನಡಿಗ) 5 ಅಡಿ ಎತ್ತರವಿರುವ ಈಕೆ ಎಣ್ಣೆ ಕಪ್ಪು ಮೈ ಬಣ್ಣ ಹೊಂದಿದ್ದಾಳೆ.ದುಂಡು ಮುಖದ ಈಕೆ ನಾಪತ್ತೆಯಾಗುವ ವೇಳೆ ಕುಂಕುಮ ಬಣ್ಣದ ಚೂಡಿದಾರ್ ಧರಿಸಿದ್ದಳು. ಕನ್ನಡ ಮತ್ತು ತುಳು ಭಾಷೆ ಮಾತನಾಡುವ ಈ ಯುವತಿಯ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಮೂಲ್ಕಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಯನ್ನು ದೂ. ಸಂಖ್ಯೆ: 0824-2290533, 9480805332, 9480805359, ಮಂಗಳೂರು ನಗರ ಕಂಟ್ರೋಲ್ ರೂಮ್ 0824-2220800 ಸಂಪರ್ಕಿಸುವಂತೆ ತಿಳಿಸಲಾಗಿದೆ .
ಇದನ್ನು ಓದಿ: ಶಕ್ತಿನಗರದ ಯುವತಿ 5 ದಿನದಿಂದ ನಾಪತ್ತೆ
ಇದನ್ನು ಓದಿ; ಮಂಗಳೂರಿನಲ್ಲಿ 19 ವರ್ಷದ ಯುವತಿ ನಾಪತ್ತೆ
(ಗಲ್ಫ್ ಕನ್ನಡಿಗ)