
ಚಿತ್ರನಟ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣ; ಪತ್ರಕರ್ತ ಸೇರಿದಂತೆ ಮತ್ತಿಬ್ಬರ ಬಂಧನ
Tuesday, November 3, 2020
(ಗಲ್ಫ್ ಕನ್ಬಡಿಗ)ಮಂಗಳೂರು; ಚಿತ್ರನಟ ಸುರೇಂದ್ರ ಬಂಟ್ವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
(ಗಲ್ಫ್ ಕನ್ಬಡಿಗ)ನಟನ ಹತ್ಯೆ ಪ್ರಕರಣದಲ್ಲಿ ಈ ಹಿಂದೆ 9 ಮಂದಿಯನ್ನು ಬಂಧಿಸಲಾಗಿದ್ದು ಬಂಧಿತರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.
(ಗಲ್ಫ್ ಕನ್ಬಡಿಗ)ಹಿಂದೆ ಸ್ಥಳೀಯ ಚಾನೆಲ್ ಗೆ ಬೆಳ್ತಂಗಡಿ ವರದಿಗಾರನಾಗಿ , ಇತ್ತೀಚೆಗೆ ವೆಬ್ ಸೈಟ್ ವೊಂದರಲ್ಲಿ ಗುರುತಿಸಿಕೊಂಡಿದ್ದ ಪ್ರತೀಕ್ ಮತ್ತು ಮಂಗಳೂರು ತಾಲ್ಲೂಕಿನ ಬೊಂದೇಲ್ ನ ಕೊಂಚಾಡಿ ನಿವಾಸಿ ಜಯೇಶ್@ಸಚ್ಚು(28) ಬಂಧಿತರು.
(ಗಲ್ಫ್ ಕನ್ಬಡಿಗ)ಅಕ್ಟೋಬರ್ 20 ರಂದು ಬಂಟ್ವಾಳದ ಭಂಡಾರಿ ಬೆಟ್ಟುವಿನ, ವಸ್ತಿ ಅಪಾರ್ಟ್ ಮೆಂಟ್ ನ ಸುರೇಂದ್ರ ಭಂಡಾರಿ ಗೆ ಸಂಬಂಧಿಸಿದ ಪ್ಲಾಟ್ ನಲ್ಲಿ ಸುರೇಂದ್ರ ಭಂಡಾರಿ ಯವರನ್ನು ದುಷ್ಕರ್ಮಿಗಳು, ಕೊಚ್ಚಿ ಕೊಲೆ ಮಾಡಿದ್ದರು.
ಇದನ್ನು ಓದಿ; ಮಂಗಳೂರಿನಲ್ಲಿ 25 ವರ್ಷದ ಯುವತಿ ನಾಪತ್ತೆ
(ಗಲ್ಫ್ ಕನ್ಬಡಿಗ)ತನಿಖೆಯಲ್ಲಿ ಹೊರಬಂದ ಮಾಹಿತಿಯಂತೆ ಕೊಲೆ ಮಾಡಿದ ಪ್ರಮುಖ ಆರೋಪಿಗಳಾದ ಸತೀಶ್ ಮತ್ತು ಗಿರೀಶ್ ನಿಗೆ ತಲೆಮರೆಸಿಕೊಳ್ಳಲು ಆಶ್ರಯ,ವಾಹನ ಮತ್ತು ಹಣದ ವ್ಯವಸ್ಥೆ ಮಾಡಿದ್ದ ಹಾಗೂ ಇದಕ್ಕಾಗಿ 2,50,000 ರೂಪಾಯಿ ಹಣ ಪಡೆದಿದ್ದ ಬೆಳ್ತಂಗಡಿ ತಾಲ್ಲೂಕಿನ,ಲಾಯಿಲ ಗ್ರಾಮದ ಪ್ರತೀಕ್(27) ಮತ್ತು ಇದೇ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಹಾಗೂ ಪ್ರಮುಖ ಆರೋಪಿ ಶರಣ್ ಆಕಾಶಭವನ ನ ನಿರ್ದೇಶನದಂತೆ ಸುಫಾರಿ ಹಣವನ್ನುಆರೋಪಿ ಪ್ರದೀಪ್ @ಪಪ್ಪು ವಿನಿಂದ ಪಡೆದು ಹತ್ಯೆಗೆ ಸಹಕರಿಸಿದ್ದ ಮಂಗಳೂರು ತಾಲ್ಲೂಕಿನ ಬೊಂದೇಲ್ ನ ಕೊಂಚಾಡಿ ನಿವಾಸಿ ಜಯೇಶ್@ಸಚ್ಚು(28) ಎಂಬುವರನ್ನು ತನಿಖಾಧಿಕಾರಿಗಳು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
(ಗಲ್ಫ್ ಕನ್ಬಡಿಗ)