ನಾಳೆಯಿಂದ ಕಾಲೇಜು ಆರಂಭ: ಮಂಗಳೂರಿನಲ್ಲಿ ತಯಾರಿ ಹೇಗಿದೆ ಗೊತ್ತಾ? ವಿಡಿಯೋ ನೋಡಿ
(ಗಲ್ಪ್ ಕನ್ನಡಿಗ)ಮಂಗಳೂರು: ಕೊರೊನಾ ಬಳಿಕ ಶೈಕ್ಷಣಿಕ ವರ್ಷ ಆರಂಭವಾಗದೆ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದ ಅಂತಿಮ ಪದವಿ , ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಾಳೆಯಿಂದ ಕಾಲೇಜು ಆರಂಭವಾಗಲಿದೆ.
(ಗಲ್ಪ್ ಕನ್ನಡಿಗ)ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪದವಿ ವಿದ್ಯಾರ್ಥಿಗಳು , ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಾಳೆ ಕಾಲೇಜು ಆರಂಭವಾಗಲಿದ್ದು ಶಿಕ್ಷಣ ಸಂಸ್ಥೆಗಳಲ್ಲಿ ತಯಾರಿ ಆರಂಭಿಸಲಾಗಿದೆ. ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ Dr. P. Dayananda Pai Sathish Pai Government First Grade College ನಲ್ಲಿ ಕಾಲೇಜು ಆರಂಭಕ್ಕೆ ಅಂತಿಮ ಸಿದ್ದತೆಗಳು ನಡೆದಿದೆ.
(ಗಲ್ಪ್ ಕನ್ನಡಿಗ)ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಬೇಕಾಗಿರುವುದರಿಂದ ಈ ಕಾಲೇಜಿನಲ್ಲಿ ಕೊರೊನಾ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ದ.ಕ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಈ ಕಾಲೇಜಿಗೆ ಬಂದು ವಿದ್ಯಾರ್ಥಿಗಳ ಗಂಟಲು ದ್ರವ ಪರೀಕ್ಷೆ ನಡೆಸಿದರು.
(ಗಲ್ಪ್ ಕನ್ನಡಿಗ)ನಾಳೆಯಿಂದ ಕಾಲೇಜು ಆರಂಭವಾದರೂ ವಿದ್ಯಾರ್ಥಿಗಳಿಗೆ ಕಾಲೇಜು ಬರುವುದು ಕಡ್ಡಾಯವಲ್ಲ. ಅವರು ಆನ್ ಲೈನ್ ಮೂಲಕವು ತರಗತಿಯನ್ನು ಪಡೆಯಬಹುದು. ಕಾಲೇಜಿಗೆ ಬಂದು ಶಿಕ್ಷಣ ಪಡೆಯುವವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಬೇಕಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇರಳದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರುತ್ತಿದ್ದು ಬಸ್ ಇಲ್ಲದೆ ಇರುವುದರಿಂದ ಕೇರಳ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ಗೊಂದಲವಿತ್ತು. ಆದರೆ ಇಂದಿನಿಂದ ಮಂಗಳೂರು ಮತ್ತು ಕಾಸರಗೋಡು ನಡುವೆ ಬಸ್ ಸಂಚಾರ ಆರಂಭವಾಗಿದ್ದು ಈ ಆತಂಕಕ್ಕೂ ತೆರೆ ಬಿದ್ದಿದೆ
(ಗಲ್ಪ್ ಕನ್ನಡಿಗ)