D J HALLI ಗಲಭೆ ಪ್ರಕರಣ: ಮಾಜಿ ಮೇಯರ್, ಕಾಂಗ್ರೆಸ್ ನ ಸಂಪತ್ ರಾಜ್ ಬಂಧನ
Tuesday, November 17, 2020
(ಗಲ್ಫ್ ಕನ್ನಡಿಗ)ಬೆಂಗಳೂರು; ಬೆಂಗಳೂರಿನ ಡಿ ಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ , ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ನನ್ನು ಸಿಸಿಬಿ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಸಂಪತ್ ರಾಜ್ ಬಂಧನಕ್ಕೆ ಮುಂಚೆ ಈತನಿಗೆ ಆಶ್ರಯ ನೀಡಿದ ಆರೋಪಿ ರಿಯಾಜುದ್ದೀನ್ ನನ್ನು ಪೊಲೀಸರು ಬಂಧಿಸಿದ್ದರು. ಆತನ ಮಾಹಿತಿ ಮೇರೆಗೆ ಬೆಂಗಳೂರಿನ ಅಜ್ಞಾತ ಸ್ಥಳದಲ್ಲಿ ಅವಿತುಕೊಂಡಿದ್ದ ಸಂಪತ್ ರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.
(ಗಲ್ಫ್ ಕನ್ನಡಿಗ)ಡಿ ಜೆ ಹಳ್ಳಿ ಗಲಭೆಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಲು ಪ್ರಚೋದನೆ ನೀಡಿದ ಆರೋಪ ಸಂಪತ್ ಮೇಲಿದೆ.
(ಗಲ್ಫ್ ಕನ್ನಡಿಗ)ಕೊರೊನಾ ವೈರಸ್ ನೆಪದಲ್ಲಿ ಸಂಪತ್ ರಾಜ್ ಸೆ. 14 ರಿಂದ 29 ವರೆಗೆ ಮತ್ತು ಅಕ್ಟೋಬರ್ 4 ರಿಂದ 14 ವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸಂಪತ್ ರಾಜ್ ಅವರು ಆಸ್ಪತ್ರೆಯಿಂದಲೇ ಪರಾರಿಯಾಗಿದ್ದು ಪೊಲೀಸರು ಆತನ ಹುಡುಕಾಟ ನಡೆಸುತ್ತಿದ್ದರು
(ಗಲ್ಫ್ ಕನ್ನಡಿಗ)