
ಗುರುಪುರದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ತಲವಾರು ದಾಳಿ
(ಗಲ್ಫ್ ಕನ್ನಡಿಗ)ಮಂಗಳೂರು; ಮಂಗಳೂರಿನ ಗುರುಪುರದ ಕಂದಾವರದಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಮೇಲೆ ತಲವಾರು ದಾಳಿ ನಡೆದಿದೆ.
(ಗಲ್ಫ್ ಕನ್ನಡಿಗ)ಘಟನೆಯಲ್ಲಿ ಅಬ್ದುಲ್ ಎಂಬವರು ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
(ಗಲ್ಫ್ ಕನ್ನಡಿಗ)ಗುರುಪುರದ ಕಂದಾವರದಲ್ಲಿ ಕಂದಾವರ ನಿವಾಸಿ ಅಬ್ದುಲ್ಲಾ ಅವರು ನಡೆದುಕೊಂಡು ಹೋಗುವಾಗ ಇಬ್ಬರು ತಲವಾರಿನಿಂದ ದಾಳಿ ಮಾಡಿದ್ದಾರೆ.
(ಗಲ್ಫ್ ಕನ್ನಡಿಗ)ತಲವಾರು ದಾಳಿ ಮಾಡಿದ ಬಳಿಕ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಬ್ದುಲ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಆರೋಪಿಗಳ ಶೋಧ ಕಾರ್ಯ ಪೊಲೀಸರು ನಡೆಸುತ್ತಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
(ಗಲ್ಫ್ ಕನ್ನಡಿಗ)