ಮಂಜೇಶ್ವರ ಶಾಸಕ ಕಮರುದ್ದೀನ್ ಬಂಧನ
(ಗಲ್ಪ್ ಕನ್ನಡಿಗ)ಮಂಜೇಶ್ವರ: ವಂಚನೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ ಮಂಜೇಶ್ವರ ಶಾಸಕ ಎಂ ಸಿ ಕಮರುದ್ದೀನ್ ಅವರನ್ನು ವಿಶೇಷ ತನಿಖಾ ತಂಡ ಬಂಧಿಸಿದೆ.
(ಗಲ್ಪ್ ಕನ್ನಡಿಗ)ಮಂಜೇಶ್ವರ ಶಾಸಕ ಎಂ ಸಿ ಕಮರುದ್ದೀನ್ ಅವರು 130 ಕೋಟಿ ರೂ ಗಳಷ್ಟು ವಂಚನೆ ಮಾಡಿರುವ ಬಗ್ಗೆ ತನಿಖೆ ನಡೆಯುತ್ತಿತ್ತು. ಇಂದು ಕಾಸರಗೋಡಿನ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ತನಿಖಾ ತಂಡ ವಿಚಾರಣೆ ನಡೆಸಿ ಬಂಧಿಸಿದೆ.
(ಗಲ್ಪ್ ಕನ್ನಡಿಗ)ಕಮರುದ್ದೀನ್ ಅವರ ತನಿಖೆಯ ನೇತೃತ್ವದವನ್ನು ಪಿ ವಿವೇಕ್ ಕುಮಾರ್ ವಹಿಸಿದ್ದರು. ವಂಚನೆ ಪ್ರಕರಣದಲ್ಲಿ ಶಾಸಕರ ಪಾತ್ರದ ಬಗ್ಗೆ ಮಾಹಿತಿಯನ್ನು ಕಲೆಹಾಕಿರುವ ತನಿಖಾ ತಂಡ ಅವರನ್ನು ಬಂಧಿಸಿದೆ ಎಂದು ತಿಳಿದುಬಂದಿದೆ.
ಎಂ ಸಿ ಕಮರುದ್ದೀನ್ ಅವರು 2019 ಅಕ್ಟೋಬರ್ 24 ರಂದು ನಡೆದ ಉಪಚುನಾವಣೆಯಲ್ಲಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಿಂದ ಯುಡಿ ಎಫ್ ಅಭ್ಯರ್ಥಿಯಾಗಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದಿಂದ ಗೆದ್ದು ಬಂದಿದ್ದರು
(ಗಲ್ಪ್ ಕನ್ನಡಿಗ)