ಸಿವಿಲ್ ಕೋರ್ಟ್ ಚಳಿಗಾಲದ ರಜೆ ಕಡಿತ: ಹೈಕೋರ್ಟ್ ಅಧಿಸೂಚನೆ
Thursday, November 19, 2020
ರಾಜ್ಯಾದ್ಯಂತ ಸಿವಿಲ್ ನ್ಯಾಯಾಲಯಗಳ ಚಳಿಗಾಲದ ರಜೆಯನ್ನು ಕಡಿತಗೊಳಿಸಿ ಮಾನ್ಯ ಕನಾ೯ಟಕ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ
2020 ರ ಹೈಕೋರ್ಟ್ ಕ್ಯಾಲೆಂಡರ್ ಪ್ರಕಾರ ನ್ಯಾಯಾಲಯಗಳ ಚಳಿಗಾಲದ ರಜೆಯು ದಿನಾಂಕ 21.12.2020 ರಿಂದ 1.1.2021 ರ ವರೆಗೆ ನಿಗದಿಯಾಗಿತ್ತು. ಆದರೆ ಕೋವಿಡ್ -19 ಮಹಾಮಾರಿಯಿಂದ ನ್ಯಾಯಾಲಯದ ಬಹಳಷ್ಟು ಕೆಲಸದ ದಿನಗಳು ನಷ್ಟವಾಗಿವೆ. ಮಾನ್ಯ ಕರ್ನಾಟಕ ಹೈಕೋರ್ಟ್ ನ ಪೂರ್ಣ ನ್ಯಾಯಾಲಯ ಸಭೆಯು ದಿನಾಂಕ 19.10.2020 ರಂದು ಕೈಗೊಂಡ ನಿರ್ಣಯ ಈ ಕೆಳಗಿನಂತಿದೆ.
ಕೋವಿಡ್ -19 ಮಹಾಮಾರಿಯಿಂದ ನ್ಯಾಯಾಲಯದ ಬಹಳಷ್ಟು ಕೆಲಸ ದಿನಗಳು ನಷ್ಟವಾಗಿವೆ. ಪೂರ್ಣ ನ್ಯಾಯಾಲಯ ಸಭೆಯು ಚಳಿಗಾಲದ ರಜೆಯನ್ನು ಕಡಿತಗೊಳಿಸಲು ನಿರ್ಧರಿಸಿದ್ದು ದಿನಾಂಕ 21.12.2020 ರಿಂದ ಆರಂಭವಾಗುವ ಚಳಿಗಾಲದ ರಜೆಯು ದಿನಾಂಕ 24.12.2020 ರ೦ದು ಆರಂಭವಾಗಲಿದ್ದು ದಿನಾಂಕ 1.1.2021 ರಂದು ಕೊನೆಗೊಳ್ಳಲಿದೆ. ಈ ನಿರ್ಣಯವನ್ನು ಬೆಂಗಳೂರು ಕಲ್ಬುರ್ಗಿ ಮತ್ತು ಧಾರವಾಡದ ವಕೀಲರುಗಳ ಸಂಘಗಳೊಂದಿಗೆ ಹಾಗೂ ರಾಜ್ಯ ವಕೀಲರ ಪರಿಷತ್ತಿನ ರೊಂದಿಗೆ ಸಮಾಲೋಚಿಸಿ ಕೈಗೊಳ್ಳಲಾಗಿದೆ.
ಆದುದರಿಂದ 2020 ನೆಯ ಕ್ಯಾಲೆಂಡರ್ ವರ್ಷದಲ್ಲಿ ರಾಜ್ಯದ ಸಿವಿಲ್ ವಿಭಾಗದ ಎಲ್ಲಾ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳ ಮತ್ತು ಮಾನ್ಯ ಹೈಕೋರ್ಟ್ ನ ಚಳಿಗಾಲದ ರಜೆಯನ್ನು 3 ದಿನ ಕಡಿತಗೊಳಿಸಲಾಗಿದೆ.
ದಿನಾಂಕ 21.12.2020 ರಿಂದ 1.1.2021ರ ರ ವರೆಗೆ ನೀಡಲಾಗಿದ್ದ ಚಳಿಗಾಲದ ರಜೆಯನ್ನು ಕಡಿತಗೊಳಿಸಿ ದಿನಾಂಕ 24.12.2020 ರಿಂದ 1.1.2020 ರ ವರೆಗೆ 9 ದಿನಗಳ ರಜೆ ಘೋಷಿಸಿ ಮಾನ್ಯ ಕನಾ೯ಟಕ ಹೈಕೋರ್ಟ್ ದಿನಾಂಕ 11.11.2020 ರ೦ದು ಅಧಿಸೂಚನೆ ಹೊರಡಿಸಿದೆ.
ಮಾಹಿತಿ: ಪ್ರಕಾಶ್ ನಾಯಕ್; ಶಿರಸ್ತೆದಾರರು; ಜುಡಿಶಿಯಲ್ ಸವಿ೯ಸ್ ಸೆಂಟರ್; ಮಂಗಳೂರು