ಚುನಾವಣಾ ಗಿಮಿಕ್ ಗಾಗಿ ಬಿಜೆಪಿಯಿಂದ ನಿಗಮ ಸ್ಥಾಪನೆ; ರಮಾನಾಥ ರೈ (video)
Thursday, November 19, 2020
(ಗಲ್ಫ್ ಕನ್ನಡಿಗ)ಮಂಗಳೂರು: ಚುನಾವಣಾ ಗಿಮಿಕ್ ಗಾಗಿ ಬಿಜೆಪಿ ಸರ್ಕಾರವು ನೂತನ ನಿಗಮಗಳನ್ನು ರಚಿಸುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಟೀಕಿಸಿದ್ದಾರೆ.
(ಗಲ್ಫ್ ಕನ್ನಡಿಗ)ಮಂಗಳೂರಿನಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಚುನಾವಣೆ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಈವರೆಗೆ ರೂಪಿಸಿಲ್ಲ. ಬಿಜೆಪಿ ಚುನಾವಣೆ ಮುಂದಿಟ್ಟುಕೊಂಡು ಗಿಮಿಕ್ ನಡೆಸುತ್ತಿದೆ ಎಂದು ಹೇಳಿದರು.
(ಗಲ್ಫ್ ಕನ್ನಡಿಗ) ಮರಾಠ ಅಭಿವೃದ್ಧಿ ನಿಗಮ , ವೀರಶೈವ ಅಭಿವೃದ್ಧಿ ನಿಗಮ ಮಾಡಿರುವುದರಿಂದ ಎಲ್ಲರೂ ತಮ್ಮ ನಿಗಮ ಆಗಬೇಕೆಂದು ಕೇಳುತ್ತಾರೆ. ಮಾಜಿ ಸಚಿವ ಯು. ಟಿ. ಖಾದರ್ ಅವರು ಹೇಳಿರುವಂತೆ, ಎಲ್ಲಾ ಜಾತಿಗಳ ನಿಗಮ ರಚನೆಗೆ ಸರಕಾರ ಮುಂದಾಗಬೇಕು ಎಂದರು.
(ಗಲ್ಫ್ ಕನ್ನಡಿಗ)